masthmagaa.com:

‘ಬಿಜೆಪಿ ಗೂಂಡಾಗಳು’ ನನ್ನ ಮನೆಗೆ ನುಗ್ಗಿ ಹೆಂಡ್ತಿ, ಮಕ್ಕಳ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ ಅಂತ ದೆಹಲಿ ಡಿಸಿಎಂ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಮನೀಷ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಮ್ಮ ನಿವಾಸ ಮತ್ತು ಗೇಟ್​ಗಳಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದ ದೃಶ್ಯಗಳನ್ನ ಕೂಡ ಶೇರ್ ಮಾಡಿದ್ದಾರೆ. ‘ನಾನು ಮನೆಯಲ್ಲಿ ಇಲ್ಲದಿದ್ದಾಗ ಬಿಜೆಪಿ ಗೂಂಡಾಗಳು ಮನೆಯ ಬಾಗಿಲು  ಮುರಿದು ಒಳ ಬಂದು ನನ್ನ ಹೆಂಡತಿ ಮತ್ತು ಮಕ್ಕಳ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಅಮಿತ್ ಶಾ ಅವರೇ, ದೆಹಲಿ ರಾಜಕಾರಣದಲ್ಲಿ ಸೋತಿರುವ ನೀವು ನಮ್ಮನ್ನ ಈ ರೀತಿ ನಿಭಾಯಿಸುತ್ತೀರಾ?’ ಅಂತ ಮನೀಷ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರ ನಡೆಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ದೆಹಲಿ ಪೊಲೀಸರು ದೂರು ದಾಖಲಿಸಿಕೊಂಡು 6 ಜನರನ್ನ ವಶಕ್ಕೆ ಪಡೆದಿದ್ದಾರೆ. ಮತ್ತೊಂದುಕಡೆ ಪೊಲೀಸರೇ ಬಿಜೆಪಿ ಕಾರ್ಯಕರ್ತರಿಗೆ ಈ ರೀತಿ ಮಾಡಲು ಸಪೋರ್ಟ್ ಮಾಡಿದ್ದಾರೆ ಅಂತ ಆಮ್ ಆದ್ಮಿ ಪಕ್ಷ ಆರೋಪ ಮಾಡಿದೆ. ಮನೀಷ್ ಸಿಸೋಡಿಯಾ ಟ್ವೀಟ್ ಮಾಡಿದ ಸಿಸಿ ಕ್ಯಾಮರಾ ವಿಡಿಯೋ ಇಲ್ಲಿದೆ ನೋಡಿ..

-masthmagaa.com

Contact Us for Advertisement

Leave a Reply