ವಾಹನ ಖರೀದಿದಾರರಿಗೆ ದೆಹಲಿ ಸರ್ಕಾರದಿಂದ ಗುಡ್​ ನ್ಯೂಸ್​

masthmagaa.com:

ಇತ್ತೀಚೆಗೆಷ್ಟೆ ಬ್ಯಾಟರಿ ಚಾಲಿತ ವಿದ್ಯುತ್​ ವಾಹನಗಳಿಗೆ ರಸ್ತೆ ತೆರಿಗೆಯಿಂದ ವಿನಾಯ್ತಿ ನೀಡಿದ್ದ ದೆಹಲಿಯ ಕೇಜ್ರಿವಾಲ್ ಸರ್ಕಾರ ಇದೀಗ ಎಲೆಕ್ಟ್ರಿಕ್ ವಾಹನಗಳಿಗೆ ರೆಜಿಸ್ಟ್ರೇಷನ್ ಶುಲ್ಕದಿಂದಲೂ ವಿನಾಯ್ತಿ ನೀಡಿದೆ. ಇನ್ನುಮುಂದೆ ದೆಹಲಿಯಲ್ಲಿ ಖರೀದಿಸುವ ಯಾವುದೇ ಬ್ಯಾಟರಿ ಚಾಲಿತ ವಿದ್ಯುತ್ ಕಾರು, ಬೈಕ್ ಅಥವಾ ಇತರ ವಾಹನಗಳಿಗೆ ನೋಂದಣಿ ಶುಲ್ಕ ಇರುವುದಿಲ್ಲ. ರೋಡ್ ಟ್ಯಾಕ್ಸ್ ಕೂಡ ಇರುವುದಿಲ್ಲ. ಇದರಿಂದ ಎಲೆಕ್ಟ್ರಿಕ್​ ವಾಹನ ಖರೀದಿದಾರರಿಗೆ ಮತ್ತಷ್ಟು ಸಹಾಯವಾಗಲಿದೆ.

ಅಂದ್ಹಾಗೆ ದೆಹಲಿಯಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ವಾಯು ಮಾಲಿನ್ಯ ನಿಯಂತ್ರಣಕ್ಕೆ ಆಮ್ ಆದ್ಮಿ ಸರ್ಕಾರ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ. ಅದ್ರಲ್ಲಿ ಆಗಸ್ಟ್​ನಲ್ಲಿ ಘೋಷಿಸಿದ ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿ ಕೂಡ ಒಂದು. ಇದರ ಪ್ರಕಾರ ಎಲೆಕ್ಟ್ರಿಕ್​ ವಾಹನಗಳಿಗೆ ಉತ್ತೇಜನ ನೀಡಲು ಬ್ಯಾಟರಿ ಚಾಲಿತ ಹೊಸ ವಾಹನಗಳಿಗೆ ರೆಜಿಸ್ಟ್ರೇಷನ್ ಫೀಸ್, ರೋಡ್ ಟ್ಯಾಕ್ಸ್​ನಿಂದ ವಿನಾಯ್ತಿ ನೀಡುವುದರ ಜೊತೆಗೆ ಒಂದೂವರೆ ಲಕ್ಷ ರೂಪಾಯಿಯಷ್ಟು ಪ್ರೋತ್ಸಾಹಧನ ನೀಡುವ ಭರವಸೆ ನೀಡಲಾಗಿತ್ತು. ಅದರಂತೆ ಈಗ ರೆಜಿಸ್ಟ್ರೇಷನ್ ಫೀಸ್ ಮತ್ತು ರೋಡ್​ ಟ್ಯಾಕ್ಸ್​ನಿಂದ ವಿನಾಯ್ತಿ ನೀಡಲಾಗಿದೆ.

-masthmagaa.com

Contact Us for Advertisement

Leave a Reply