ಧೋನಿ ಹಣ್ಣು-ತರಕಾರಿ ಕೃಷಿ.. ದುಬೈಗೆ ರಪ್ತು ಮಾಡಲು ಸಿದ್ಧತೆ..!

masthmagaa.com:

ರಾಂಚಿ: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಯಾವಾಗಲೂ ಟ್ರೆಂಡ್ ಸೆಟ್ಟಿಂಗ್ ಸೆಲೆಬ್ರಿಟಿ. 16 ವರ್ಷಗಳ ಕ್ರಿಕೆಟ್ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿದ ಬಳಿಕ  ತವರು ರಾಂಚಿಯ ತಮ್ಮ 43 ಎಕರೆ ತೋಟದ ಪೈಕಿ 10 ಎಕರೆಯಲ್ಲಿ ಸಾವಯವ ಹಣ್ಣು ಮತ್ತು ತರಕಾರಿ ಕೃಷಿ ಆರಂಭಿಸಿದ್ಧಾರೆ. ರಾಂಚಿ ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ಕೋಸು, ಟೊಮ್ಯಾಟೋ, ಸ್ಟ್ರಾಬೆರಿ ಹೀಗೆ ಹತ್ತು ಹಲವು ಹಣ್ಣು, ತರಕಾರಿ ಬೆಳೆಯಲು ಶುರು ಮಾಡಿದ್ದಾರೆ. ಅಂದಹಾಗೆ, ಧೋನಿ ಇದೇ ತರಕಾರಿಗಳನ್ನು ದುಬೈ ಮಾರುಕಟ್ಟೆಯಲ್ಲಿ ಮಾರಲು ಸಿದ್ಧತೆ ನಡೆಸಿದ್ದಾರೆ. ಧೋನಿ ತೋಟದಲ್ಲಿ ಬೆಳೆದ ಹಣ್ಣು, ತರಕಾರಿಗಳನ್ನು ದುಬೈಗೆ ತಲುಪಿಸುವ ಜವಾಬ್ದಾರಿಯನ್ನು ಜಾರ್ಖಂಡ್ ಕೃಷಿ ಇಲಾಖೆ ವಹಿಸಿಕೊಂಡಿರುವುದಾಗಿ ವರದಿಯಾಗಿದೆ. ಐಪಿಎಲ್ ಸರಣಿಯಲ್ಲಿ ಆಡಿದ ಬಳಿಕ ಧೋನಿ ಸದ್ಯ ಕುಟುಂಬದ ಜೊತೆ ದುಬೈ ಪ್ರವಾಸದಲ್ಲಿದ್ದಾರೆ. ಈ ಮಧ್ಯೆ, ದುಬೈಗೆ ಹನಿಮೂನ್‌ ತೆರಳಿರುವ ಕ್ರಿಕೆಟಿಗ ಚಹಾಲ್ ಮತ್ತು ಧನಶ್ರೀ ವರ್ಮಾ ದಂಪತಿಗೆ ಧೋನಿ ಔತಣಕೂಟವನ್ನು ಏರ್ಪಡಿಸಿದ್ದರು.

-masthmagaa.com

Contact Us for Advertisement

Leave a Reply