masthmagaa.com:

ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್​ ಇಲ್ಲವಾಗಿ ಮೂರು ತಿಂಗಳು ಕಳೆದ್ರೂ ಅವರ ನಿಗೂಢ ಸಾವಿನ ರಹಸ್ಯ ಮಾತ್ರ ಇನ್ನೂ ಬಯಲಾಗಿಲ್ಲ. ಇದೀಗ ಸುಶಾಂತ್ ಅವರ ಸಾವಿಗೂ 6 ದಿನ ಮುನ್ನ ಅಂದ್ರೆ ಜೂನ್ 8ರಂದು ಬಿಲ್ಡಿಂಗ್​ನಿಂದ ಬಿದ್ದು ಮೃತಪಟ್ಟ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಮೂಡಿದೆ. ಇಬ್ಬರ ಸಾವಿಗೂ ಲಿಂಕ್ ಇದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ಇತ್ತೀಚೆಗೆ ಈ ಬಗ್ಗೆ ಮಾತನಾಡಿದ್ದ ಮಹಾರಾಷ್ಟ್ರ ಬಿಜೆಪಿ ಶಾಸಕ ನಿತೇಶ್ ರಾಣೆ, ‘ದಿಶಾ ಸಾಲಿಯಾನ್​ ಅವರನ್ನು ಕೊಲೆ ಮಾಡಲಾಗಿತ್ತು. ಜೂನ್ 8ರಂದು ಆಕೆ ಭಾಗಿಯಾಗಿದ್ದ ಪಾರ್ಟಿಯಲ್ಲಿ ನಡೆಯಬಾರದ್ದೇನೋ ನಡೆದಿತ್ತು. ಹೀಗಾಗಿ ಪಾರ್ಟಿಯಿಂದ ಹೊರನಡೆದಿದ್ದ ದಿಶಾ, ಮನೆಗೆ ಬರುವಾಗ ಪೊಲೀಸರಿಗೆ ಅಂದ್ರೆ 100 ನಂಬರ್​ಗೆ ಕಾಲ್ ಮಾಡಿದ್ರು. ಬಳಿಕ ನಿಗೂಢವಾಗಿ ಮೃತಪಟ್ಟರು’ ಅಂತ ಸ್ಫೋಟಕ ಹೇಳಿಕೆ ಕೊಟ್ಟಿದ್ದರು.

ಆದ್ರೆ ಪೊಲೀಸರಿಗೆ ಕರೆ ಮಾಡಿದ್ರೂ ಅವರು ದಿಶಾ ಸಾಲಿಯಾನ್ ಸಹಾಯಕ್ಕೆ ಧಾವಿಸಲಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ. ಇದೀಗ ಈ ಬಗ್ಗೆ ಸ್ಪಷ್ಟನೆ ಕೊಟ್ಟಿರೋ ಮುಂಬೈ ಪೊಲೀಸರು, ‘ದಿಶಾ ಸಾಲಿಯಾನ್ ತಮ್ಮ ಫ್ರೆಂಡ್​ ಅಂಕಿತಾಗೆ ಕೊನೆಯ ದೂರವಾಣಿ ಕರೆ ಮಾಡಿದ್ದರು. ಕೊನೆಯ ಬಾರಿ 100 ನಂಬರ್​ಗೆ ಕರೆ ಮಾಡಿದ್ದರು ಅನ್ನೋದು ಸುಳ್ಳು’ ಅಂತ ಹೇಳಿದ್ದಾರೆ.

ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ ಮುಂಬೈ ಪೊಲೀಸರು ‘ಕೊನೆಯ ಕಾಲ್’ ಅನ್ನೋದನ್ನು ಮಾತ್ರ ಉಲ್ಲೇಖಿಸಿದ್ದಾರೆ. ಆದ್ರೆ ಜೂನ್ 8ರಂದು ದಿಶಾ ಸಾಲಿಯಾನ್​ ಫೋನ್​ನಿಂದ ಮುಂಬೈ ಪೊಲೀಸರಿಗೆ ಕರೆಯೇ ಬಂದಿರಲಿಲ್ವಾ ಅನ್ನೋದನ್ನು ಹೇಳಿಲ್ಲ.

-masthmagaa.com

Contact Us for Advertisement

Leave a Reply