ಮಗಳ ಮದುವೆಗೆ ದುಡ್ಡು ತೆಗೆದ ರೈತನಿಗೆ ನಕಲಿ ನೋಟು ಕೊಟ್ಟ ಬ್ಯಾಂಕ್..!

ಉತ್ತರ ಪ್ರದೇಶ: ಮಗಳ ಮದುವೆಗೆ ಅಂತ ಬ್ಯಾಂಕ್​​​ನಿಂದ ದುಡ್ಡು ತೆಗೆದ ರೈತನಿಗೆ ಆಟಿಕೆಯ ನೋಟುಗಳನ್ನು ನೀಡಲಾಗಿದೆ. ಉತ್ತರ ಪ್ರದೇಶದ ಹಮೀರ್​ಪುರದಲ್ಲಿ ಈ ಘಟನೆ ವರದಿಯಾಗಿದೆ.

ರೈತ ಶಿವನಾರಾಯಣ್ ತಿವಾರಿ ಎಂಬುವವರು ಅಲಹಾಬಾದ್​​ನ ಬ್ಯಾಂಕ್​​​ನಲ್ಲಿ ತನ್ನ ಮಗಳ ಮದುವೆಗೆ ಅಂತ 1 ಲಕ್ಷ ರೂಪಾಯಿ ದುಡ್ಡು ತೆಗೆದಿದ್ದರು. ನಂತರ ಮನೆಗೆ ದುಡ್ಡು ತಂದ ರೈತ ಶಿವನಾರಾಯಣ್, ವಸ್ತುಗಳನ್ನು ಖರೀದಿಸಲು ಮಾರ್ಕೆಟ್​​​ಗೆ ಹೋಗಿದ್ದಾರೆ. ಆಗ 500 ರೂಪಾಯಿಯ ನೋಟುಗಳ ಪೈಕಿ 20 ನೋಟುಗಳು ಅಂದ್ರೆ 10 ಸಾವಿರ ರೂಪಾಯಿ ಆಟಿಕೆಯ ನೋಟುಗಳು ಇರೋದು ಪತ್ತೆಯಾಗಿದೆ.

ಹೀಗಾಗಿ ನೇರವಾಗಿ ಬ್ಯಾಂಕ್​​​ಗೆ ತೆರಳಿ ಈ ಬಗ್ಗೆ ತಿಳಿಸಿದ್ರೆ ನಮಗೇನೂ ಗೊತ್ತಿಲ್ಲ ಅಂತ ಹಾರಿಕೆಯ ಉತ್ತರ ಕೊಟ್ಟಿದ್ದಾರೆ. ಒರಿಜಿನಲ್ ನೋಟ್ ಮಾದರಿಯಲ್ಲೇ ಇರೋ ಈ ನೋಟಿನಲ್ಲಿ ಫುಲ್ ಆಫ್ ಫನ್​​.. ಭಾರತೀಯ ಮಕ್ಕಳ ಬ್ಯಾಂಕ್ ಎಂದು ಬರೆಯಲಾಗಿದೆ. ಈ ನೋಟನ್ನು 500 ರೂಪಾಯಿ ನೋಟುಗಳ ನಡುವೆ ಇಟ್ಟು ರೈತನಿಗೆ ಮೋಸ ಮಾಡಲಾಗಿದೆ.

Contact Us for Advertisement

Leave a Reply