ತೀವ್ರಗೊಂಡ ರೈತರ ಪ್ರತಿಭಟನೆ, ದೆಹಲಿಗೆ ಮುತ್ತಿಗೆ ಹಾಕಲು ಪ್ಲಾನ್!

masthmagaa.com

ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್, ಹರಿಯಾಣ, ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ನಿಲ್ಲುವ ಲಕ್ಷಣ ಕಾಣ್ತಿಲ್ಲ. ದೆಹಲಿಯ ಬುರಾರಿ ಕ್ರೀಡಾಂಗಣದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ನೀಡಿದ್ರೂ ಕೂಡ ರೈತರು ಈಗ ಅಲ್ಲಿಗೆ ಹೋಗಲ್ಲ ಅಂತಿದ್ದಾರೆ. ಅದು ಕ್ರೀಡಾಂಗಣವಲ್ಲ, ಓಪನ್ ಜೈಲ್​. ಹೀಗಾಗಿ ಅಲ್ಲಿಗೆ ಹೋಗುವ ಬದಲು ದೆಹಲಿಗೆ ಮುತ್ತಿಗೆ ಹಾಕ್ತೀವಿ. ದೆಹಲಿಯ 5 ಎಂಟ್ರಿ ಪಾಯಿಂಟ್​ಗಳನ್ನ ಬಂದ್ ಮಾಡ್ತೀವಿ. ನಮ್ಮ ಬಳಿ ನಾಲ್ಕೈದು ತಿಂಗಳಿಗಾಗುವಷ್ಟು ರೇಷನ್ ಇದೆ ಅಂತ ರೈತ ಸಂಘಟನೆಗಳು ಎಚ್ಚರಿಕೆ ಕೊಟ್ಟಿವೆ.

ಮತ್ತೊಂದುಕಡೆ ರೈತರು ಪ್ರತಿಭಟನೆಯನ್ನ ಕೈಬಿಟ್ಟು ಡಿಸೆಂಬರ್ 3ರಂದು ಮಾತುಕತೆಗೆ ಬರಬೇಕು ಅಂತ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಅತ್ತ ಹರಿಯಾಣ ಮತ್ತು ಪಂಜಾಬ್ ರಾಜ್ಯಗಳ ಸಂಘರ್ಷ ಕೂಡ ಜೋರಾಗಿದೆ. ರೈತರ ಪ್ರತಿಭಟನೆಯಿಂದ ಹರಿಯಾಣದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗಿ ಏನಾದ್ರೂ ಅನಾಹುತವಾದ್ರೆ ಅದಕ್ಕೆ ಪಂಜಾಬ್ ಸರ್ಕಾರವೇ ನೇರ ಹೊಣೆ ಅಂತ ಹರಿಯಾಣ ಸಿಎಂ ಮನೋಹರ್​ಲಾಲ್ ಖಟ್ಟರ್ ಎಚ್ಚರಿಸಿದ್ದಾರೆ. ಇನ್ನು ಪ್ರತಿಭಟನೆಗೆ ಅಂತ ಬಂದಿದ್ದ ವ್ಯಕ್ತಿಯೊಬ್ಬ ಕಾರಿನಲ್ಲಿ ನಿದ್ರೆಗೆ ಜಾರಿದ್ದಾಗ ಕಾರಿಗೆ ಬೆಂಕಿ ತಗುಲಿ ಸಜೀವ ದಹನವಾಗಿದ್ದಾನೆ.

-masthmagaa.com

Contact Us for Advertisement

Leave a Reply