masthmagaa.com:

ಐಪಿಎಲ್​ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್​ ಕಿಂಗ್ಸ್ ತಂಡ 16 ರನ್​ಗಳ ಸೋಲು ಅನುಭವಿಸಿದೆ. ನಾಯಕ ಧೋನಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್​ ಇಳಿದಿದ್ದೇ ಸಿಎಸ್​ಕೆ ಸೋಲಿಗೆ ಕಾರಣ, ಒಂದ್ವೇಳೆ ಧೋನಿ ಸ್ವಲ್ಪ ಬೇಗ ಬ್ಯಾಟಿಂಗ್​ ಬಂದಿದ್ದರೆ ತಂಡ ಗೆಲ್ಲುತ್ತಿತ್ತು ಅನ್ನೋ ಮಾತುಗಳು ಕೇಳಿ ಬರ್ತಿವೆ.

217 ರನ್​ನಂತಹ ದೊಡ್ಡ ಟಾರ್ಗೆಟ್​ ಚೇಸ್ ಮಾಡುವಾಗ ಧೋನಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದಿದ್ದು ಅಭಿಮಾನಿಗಳಿಗೂ ಬೇಸರ ತಂದಿದೆ. ಋತುರಾಜ್ ಗಾಯಕ್​ವಾಡ್​, ಸ್ಯಾಮ್​ ಕರನ್, ಕೇದಾರ್ ಜಾಧವ್​ಗಿಂತಲೂ ಮೊದಲು ಧೊನಿ ಬರಬೇಕಿತ್ತು. ಆಗ ಪಂದ್ಯದ ಗತಿಯೇ ಬದಲಾಗ್ತಿತ್ತು ಎಂಬ ಚರ್ಚೆಗಳು ನಡೆಯುತ್ತಿವೆ.

ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡ ಧೋನಿ ವಿರುದ್ಧ ವಾಗ್ದಾಳಿ ನಡೆಸಿದ್ದು, 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಬಂದಿದ್ದರಲ್ಲಿ ಯಾವುದೇ ಅರ್ಥವಿಲ್ಲ ಅಂತ ಹೇಳಿದ್ದಾರೆ.  ‘7ನೇ ಕ್ರಮಾಂಕದಲ್ಲಿ ಧೋನಿ ಬ್ಯಾಟಿಂಗ್​ಗೆ ಬಂದಿದ್ದು ನನಗೆ ನಿಜವಾಗಲೂ ಆಶ್ಚರ್ಯ ತಂದಿತ್ತು. ಋತುರಾಜ್ ಗಾಯಕ್​ವಾಡ್ ಮತ್ತು ಸ್ಯಾಮ್ ಕರನ್​ ಅವರನ್ನು ಮೊದಲು ಕಳಿಸಿದ್ದರಲ್ಲಿ ಅರ್ಥವೇ ಇಲ್ಲ. ನೀವು ಮುಂದೆ ನಿಂತು ತಂಡವನ್ನು ಮುನ್ನಡೆಸಬೇಕು. ತಂಡವನ್ನು ಮುನ್ನಡೆಸುವುದು ಅಂದ್ರೆ ಇದಲ್ಲ. 217 ರನ್​ ಚೇಸ್ ಮಾಡುವಾಗ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿಯುವುದು ಎಷ್ಟು ಸರಿ..? ಆಗ ಆಟವೇ ಮುಗಿದಿತ್ತು. ಡುಪ್ಲೆಸಿಸ್ ಏಕಾಂಗಿ ಹೋರಾಟ ನಡೆಸಿದ್ರು’ ಅಂತ ಧೋನಿ ನಿರ್ಧಾರವನ್ನು ಗೌತಮ್ ಗಂಭೀರ್ ಟೀಕಿಸಿದ್ದಾರೆ.

-masthmagaa.com

Contact Us for Advertisement

Leave a Reply