‘ಡಿಯರ್ ನರೇಂದ್ರ..’ ಪ್ರಧಾನಿ ಮೋದಿಗೆ ಶುಭಾಶಯಗಳ ಮಹಾಪೂರ

masthmagaa.com:

ದೆಹಲಿ: ಪ್ರಧಾನಿ ಮೋದಿಯವರ ಹುಟ್ಟುಹಬ್ಬಕ್ಕೆ ಗಣ್ಯಾತಿಗಣ್ಯರು ಶುಭಕೋರಿದ್ಧಾರೆ. ರಷ್ಯಾ ಅಧ್ಯಕ್ಷ ಪುಟಿನ್, ಜರ್ಮನಿಯ ಪ್ರಧಾನಿ ಎಂಜೆಲಾ ಮರ್ಕೆಲ್​​​, ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳ ನಾಯಕರು ಶುಭಕೋರಿದ್ದಾರೆ. ಅದ್ರಲ್ಲೂ ಜರ್ಮನ್ ಪ್ರಧಾನಿ ಎಂಜೆಲಾ ಮರ್ಕೆಲ್ 2 ಪುಟಗಳ ಪತ್ರದ ಮೂಲಕ ಶುಭಕೋರಿದ್ಧಾರೆ. ಡಿಯರ್ ನರೇಂದ್ರ ಎಂದು ಕರೆದಿರುವ ಎಂಜೆಲಾ ಮರ್ಕೆಲ್​​, ಇಂಡೋ-ಜರ್ಮನ್ ಇಂಟರ್​​ ಗವರ್ನ್​​ಮೆಂಟಲ್ ಕನ್ಸಲ್ಟೇಷನ್​​ ವೇಳೆ ನಡೆದ ಭೇಟಿಯನ್ನು ನೆನೆದಿದ್ದಾರೆ. ಜೊತೆಗೆ ಭವಿಷ್ಯದಲ್ಲಿ ನಿಮಗೆ ಒಳ್ಳೆಯದನ್ನು ಬಯಸುತ್ತೇನೆ. ವಿಶೇಷವಾಗಿ ಈ ಸಮಯದಲ್ಲಿ ಆರೋಗ್ಯ, ಸಂತೋಷ  ನಿಮ್ಮದಾಗಲಿ ಅಂತ ಬರೆದಿದ್ದಾರೆ. ಈ ಪತ್ರವನ್ನು ಪ್ರಧಾನಿ ಮೋದಿಯವರ ಟ್ವಿಟ್ಟರ್​ನಲ್ಲಿ ಶೇರ್ ಮಾಡಲಾಗಿದೆ.

-masthmagaa.com

Contact Us for Advertisement

Leave a Reply