ಘೀ ಅನ್ನೋದು ಕೋಡ್​ವರ್ಡ್- ಎನ್ಐಎ, ಹಾಗೆಲ್ಲ ಡಿಸೈಡ್ ಮಾಡಕ್ಕಾಗಲ್ಲ- ಕೋರ್ಟ್​!

masthmagaa.com:

ಪಾಕಿಸ್ತಾನದ ಉಗ್ರ ಸಂಘಟನೆಗಳಿಂದ ದುಡ್ಡು ಪಡೆದ ಆರೋಪದ ಮೇಲೆ NIA ಬಂಧಿಸಿದ್ದ ನಾಲ್ವರನ್ನು ದೆಹಲಿ ಕೋರ್ಟ್ ಬಿಡುಗಡೆ ಮಾಡಿದೆ. ಹರಿಯಾಣದ ಪಲ್ವಾಲ್ ಜಿಲ್ಲೆಯ ಅಟ್ಟಾವರ್ ಗ್ರಾಮದಲ್ಲಿ ಮೊಹ್ಮದ್ ಸಲ್ಮಾನ್, ಮೊಹಮ್ಮದ್ ಸಲೀಂ, ಆರಿಫ್ ಗುಲಾಂ ಬಶೀರ್ ಧರಂಪುರಿಯಾ ಮತ್ತು ಮೊಹ್ಮದ್ ಹುಸ್ಸೈನ್ ಮೊಲಾನಿಯನ್ನು NIA ಅರೆಸ್ಟ್​ ಮಾಡಿತ್ತು. ಇವರು ಮಸೀದಿ ಕಟ್ಟೋ ನೆಪದಲ್ಲಿ ಪಾಕ್ ಮೂಲದ ಫಲಾಹ್ ಇ ಇನ್ಸಾನಿಯತ್ ಫೌಂಡೇಷನ್​​ನಿಂದ ದುಡ್ಡು ಪಡೆಯುತ್ತಿದ್ರು. ನಂತರ ಯುವಕರನ್ನು ಭಯೋತ್ಪಾದನೆಗೆ ಸೆಳೆಯಲು ಮತ್ತು ಸ್ಲೀಪರ್​ ಸೆಲ್​ಗಳಿಗಾಗಿ ಆ ದುಡ್ಡು ಬಳಸಲಾಗುತ್ತಿತ್ತು ಅಂತ ಎನ್​ಐಎ ಆರೋಪಿಸಿತ್ತು.

ಮೊಹ್ಮದ್ ಸಲ್ಮಾನ್ ಮೊಬೈಲ್​​ನಲ್ಲಿ ಪತ್ತೆಯಾದ 2 ಸಂದೇಶಗಳನ್ನು ಕೂಡ ಚಾರ್ಜ್​ಶೀಟ್​​ನಲ್ಲಿ ಉಲ್ಲೇಖಿಸಿತ್ತು. ಮತ್ತು ಆ ಸಂದೇಶದಲ್ಲಿದ್ದ ಘೀ ಅಂದ್ರೆ ತುಪ್ಪ ಅನ್ನೋ ಪದ ಸ್ಫೋಟಕದ ಕೋಡ್​ವರ್ಡ್​​​ ಆಗಿತ್ತು. ಅದೇ ರೀತಿ ಉಗ್ರರಿಗೆ ಎಲ್ಲಾ ವ್ಯವಸ್ಥೆ ಕಲ್ಪಿಸಿಕೊಡೋದು ಅನ್ನೋದಕ್ಕೆ ಖಿದಾಯತ್ ಅನ್ನೋ ಬಳಸುತ್ತಿದ್ರು ಅಂತ ಎನ್​ಎಐ ತಿಳಿಸಿತ್ತು. ಆದ್ರೆ ಈ ಪದಗಳಿಗೆ ಬೇರೆ ಬೇರೆ ಅರ್ಥವೂ ಇದೆ ಎಂದಿರೋ ಸ್ಪೆಷಲ್ ಕೋರ್ಟ್​ ಜಡ್ಜ್​​​, ಆರೋಪಿಗಳನ್ನು ಬಿಡುಗಡೆ ಮಾಡಿದೆ.

-masthmagaa.com

Contact Us for Advertisement

Leave a Reply