ಹ್ಯಾಂಟಾ ವೈರಸ್​ ಹೇಗೆ ಬರುತ್ತೆ..? ಚೀನಾ ಮಾಡ್ತಿರೋದೇನು ಗೊತ್ತಾ..?

masthmagaa.com:

ಚೀನಾ: ಕೊರೋನಾ ಇಡೀ ವಿಶ್ವವನ್ನೇ ಆತಂಕಕ್ಕೀಡು ಮಾಡಿರುವ ಬೆನ್ನಲ್ಲೇ ಚೀನಾದಲ್ಲಿ ಹ್ಯಾಂಟಾ ವೈರಸ್​​​​ಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದ. ಈ ಸುದ್ದಿ ಇಡಿ ವಿಶ್ವ ಮತ್ತೊಮ್ಮೆ ಚೀನಾವನ್ನು ಕೆಂಗಣ್ಣಿನಿಂದ ನೋಡುವಂತೆ ಮಾಡಿತ್ತು. ಹೀಗಾಗಿ ತನ್ನ ಮಾನ ಮತ್ತೊಮ್ಮೆ ಹರಾಜಾಗದಂತೆ ನೋಡಿಕೊಳ್ಳಲು ಮುಂದಾಗಿರುವ ಚೀನಾ ಇಲಿಗಳ ಮಾರಣಹೋಮ ಮಾಡ್ತಿದೆ. ಸೀಕ್ರೆಟ್ಟಾಗಿ ಆಪರೇಷನ್ ರ‍್ಯಾಟ್ ಆರಂಭಿಸಿದೆ.

ಇನ್ನು ಈ ವೈರಸ್ ಬಗ್ಗೆ ಮಾಹಿತಿ ನೀಡಿದ ದಕ್ಷಿಣ ಚೀನಾದ ಫೋಶಾನ್ ನಗರದ ವೈದ್ಯ ಹೋಂಗ್ಲಿಯಾನ್​, ಹ್ಯಾಂಟಾ ವೈರಸ್ ಆಗಮಿಸಿದೆ. ಆದ್ರೆ ಇದರಿಂದ ಆತಂಕಪಡುವ ಸಮಯ ಇನ್ನೂ ಬಂದಿಲ್ಲ ಅಂತ ಹೇಳಿದ್ದಾರೆ. ಹ್ಯಾಂಟಾ ವೈರಸ್ ಒಂದು ಬ್ಯಾಕ್ಟೀರಿಯಾದಿಂದ ಶುರುವಾಗುತ್ತೆ. ಈ ಬ್ಯಾಕ್ಟೀರಿಯಾ ಉಸಿರಾಟದ ವ್ಯವಸ್ಥೆಯನ್ನೆ ಹಾಳು ಮಾಡೋಕೆ ಶುರುಮಾಡುತ್ತೆ. ಇದಾದ ಬಳಿಕ ಹ್ಯಾಂಟಾ ವೈರಸ್ ದಾಳಿ ನಡೆಸುತ್ತೆ. ಇವೆರಡೂ ಒಟ್ಟಾಗಿ ಶಾಸಕೋಶವನ್ನೇ ಹಾಳು ಮಾಡಿ, ಮನುಷ್ಯರ ಸಾವಿಗೆ ಕಾರಣವಾಗುತ್ತೆ ಅಂತ ಹೇಳಿದ್ದಾರೆ.

ಆದ್ರೆ ಈ ವೈರಸ್​​​ಗೆ ಹೆದರುವ ಅಗತ್ಯವಿಲ್ಲ. ಇದಕ್ಕೆ ನಮ್ಮ ಬಳಿ ಔಷಧ ಇದೆ. ಇದು ಗಾಳಿಯಲ್ಲಿ ಮನುಷ್ಯರಿಗೆ ಹರಡೋದಿಲ್ಲ ಅಂತ ಚೀನಾ ಹೇಳಿಕೊಂಡಿದೆ. ಆದ್ರೆ ಚೀನಾದ ಮಹಾಮಾರಿ ಕಾಯಿಲೆಗಳ ವಿಶೇಷ ತಜ್ಞ ವೂ ಡೆಲಿಯಾನ್, ಇದು ಗಾಳಿಯ ಮೂಲದ ಒಬ್ಬರಿಂದ ಒಬ್ಬರಿಗೆ ಹರಡುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply