masthmagaa.com:

ಕೊರೋನಾ ವೈರಸ್​ಗೆ ಆಕ್ಸ್​ಫರ್ಡ್​ ಯುನಿವರ್ಸಿಟಿ ಮತ್ತು ಆಸ್ಟ್ರಝೆನೆಕಾ ಕಂಪನಿ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ‘ಕೋವಿಶೀಲ್ಡ್​’ ಲಸಿಕೆಯ 4 ಕೋಟಿ ಡೋಸ್​ಗಳನ್ನ ಉತ್ಪಾದನೆ ಮಾಡಿ ಆಗಿದೆ ಅಂತ ಪುಣೆಯ ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಘೋಷಿಸಿದೆ. ಭಾರತದಲ್ಲಿ 2021ರ ಆರಂಭದಲ್ಲಿ ಒಂದಕ್ಕಿಂತ ಹೆಚ್ಚು ಕೊರೋನಾ ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ ಅಂತ ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಣೆ ಮಾಡಿದ ಬೆನ್ನಲ್ಲೇ ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ 4 ಕೋಟಿ ಡೋಸ್​ಗಳನ್ನ ಉತ್ಪಾದನೆ ಮಾಡಿ ಇಟ್ಟಿದ್ದೀವಿ ಅಂತ ಹೇಳಿದೆ. ಜೊತೆಗೆ ‘ಕೋವಿಶೀಲ್ಡ್’ ಲಸಿಕೆಯ 3ನೇ ಮತ್ತು ಕೊನೇ ಹಂತದ ಮಾನವ ಪ್ರಯೋಗಕ್ಕೆ 1,600 ಸ್ವಯಂ ಸೇವಕರನ್ನ ನೋಂದಾಯಿಸಿಕೊಂಡಿದೆ. ಅಂದ್ಹಾಗೆ ಭಾರತದಲ್ಲಿ ಆಕ್ಸ್​ಫರ್ಡ್-ಆಸ್ಟ್ರಾಝೆನೆಕಾ ಲಸಿಕೆಯ ಉತ್ಪಾದನೆ ಮತ್ತು ಮಾನವ ಪ್ರಯೋಗವನ್ನು ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ನೋಡಿಕೊಳ್ಳುತ್ತದೆ.

ಮತ್ತೊಂದುಕಡೆ ಅಮೆರಿಕದ ನೋವಾವಾಕ್ಸ್ ಕಂಪನಿ ಅಭಿವೃದ್ಧಿಪಡಿಸುತ್ತಿರುವ ಕೊರೋನಾ ಲಸಿಕೆಯನ್ನು ಕೂಡ ಶೀಘ್ರದಲ್ಲೇ ಉತ್ಪಾದಿಸುತ್ತೇವೆ ಅಂತ ಸೀರಂ ಇನ್​ಸ್ಟಿಟ್ಯೂಟ್ ಹೇಳಿದೆ. ಜೊತೆಗೆ ನೋವಾವಾಕ್ಸ್ ಲಸಿಕೆಯ 3ನೇ ಹಂತದ ಮಾನವ ಪ್ರಯೋಗವನ್ನು ಕೂಡ ನಡೆಸಲು ಸರ್ಕಾರದಿಂದ ಅನುಮೋದನೆ ಪಡೆಯಲು ಸಿದ್ಧತೆ ನಡೆಯುತ್ತಿದೆ.

-masthmagaa.com

Contact Us for Advertisement

Leave a Reply