‘ತಾಕತ್ತಿದ್ರೆ ನಮ್ಮ ಸರ್ಕಾರವನ್ನ ಬೀಳಿಸಿ ತೋರಿಸಿ’ – ಉದ್ಧವ್ ಠಾಕ್ರೆ ಚಾಲೆಂಜ್

masthmagaa.com:

‘ಮಹಾರಾಷ್ಟ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ ಆಗುತ್ತಿದೆ. ನಾನು ಮುಖ್ಯಮಂತ್ರಿ ಆದಾಗಿನಿಂದಲೂ ಸರ್ಕಾರವನ್ನು ಉರುಳಿಸಲಾಗುತ್ತೆ ಅಂತ ಹೇಳಲಾಗುತ್ತಿತ್ತು. ತಾಕತ್ತಿದ್ರೆ ನಮ್ಮ ಸರ್ಕಾರವನ್ನು ಉರುಳಿಸಿ ತೋರಿಸಿ’ ಅಂತ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಗುಡುಗಿದ್ದಾರೆ. ಶಿವಸೇನೆ ನಡೆಸಿದ ವಾರ್ಷಿಕ ದಸರಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವಾಗ ಈ ರೀತಿ ಹೇಳಿದ್ದಾರೆ. ಮುಂದುವರೆದು ಮಾತನಾಡಿದ ಅವರು, ‘ನಮ್ಮ ರಾಜ್ಯದಲ್ಲಿ ದೇವಸ್ಥಾನಗಳನ್ನು ಯಾಕೆ ಓಪನ್ ಮಾಡ್ತಿಲ್ಲ ಅಂತ ಹಿಂದುತ್ವದ ಬಗ್ಗೆ ಪ್ರಶ್ನೆ ಮಾಡಲಾಗುತ್ತಿದೆ. ಬಾಳ್​ ಠಾಕ್ರೆಗಿಂತ ನನ್ನ ಹಿಂದುತ್ವ ಭಿನ್ನವಾಗಿದೆ ಅಂತ ಹೇಳುತ್ತಿದ್ದಾರೆ. ನಿಮ್ಮ ಹಿಂದುತ್ವ ಗಂಟೆ ಬಾರಿಸೋದು, ತಟ್ಟೆಗಳನ್ನು ತಟ್ಟೋದು. ಆದ್ರೆ ನನ್ನ ಹಿಂದುತ್ವ ಹಾಗಲ್ಲ. ಬಿಹಾರದಲ್ಲಿ ಉಚಿತ ಲಸಿಕೆ ಕೊಡುವ ಬಗ್ಗೆ ಮಾತನಾಡುತ್ತಿದ್ದೀರಿ. ಹಾಗಿದ್ರೆ ದೇಶದ ಉಳಿದ ಭಾಗ ಪಾಕಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಸೇರಿದೆಯಾ..? ಬಿಹಾರಕ್ಕೆ ಉಚಿತ ಲಸಿಕೆ ಅಂತ ಮಾತನಾಡೋರಿಗೆ ನಾಚಿಕೆಯಾಗಬೇಕು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದುಕೊಂಡೇ ಈ ರೀತಿ ಮಾತಾಡ್ತಿರಲಾ’ ಅಂತ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮತ್ತೊಂದುಕಡೆ ಶಿವಸೇನೆ ಸಂಸದ ಸಂಜಯ್ ರಾವತ್ ಮಾತನಾಡಿ, ‘ಇಲ್ಲಿಂದ ಎಲ್ಲವೂ ‘ಮಹಾ’ ಆಗಲಿದೆ. ಮಹಾ ಅಘಾಡಿ, ಮಹಾರಾಷ್ಟ್ರ ಇತ್ಯಾದಿ. ಕೇಂದ್ರದಲ್ಲೂ ‘ಮಹಾ’ ಅಧಿಕಾರಕ್ಕೆ ಬಂದ್ರೂ ಆಶ್ಚರ್ಯ ಪಡಬೇಡಿ. ಕಳೆದ ವರ್ಷ ನಮ್ಮ ಪಕ್ಷದವರು ಸಿಎಂ ಆಗ್ತಾರೆ ಅಂತ ಹೇಳಿದ್ದೆ ಹಾಗೇ ಆಯ್ತು. ಈ ಸರ್ಕಾರ 5 ವರ್ಷವಲ್ಲ 25 ವರ್ಷ ಮುಂದುವರೆಯಲಿದೆ’ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply