masthmagaa.com:

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಸೋತಿದ್ದ ಟೀಂ ಇಂಡಿಯಾ ಸೇಡು ತೀರಿಸಿಕೊಂಡಿದೆ. ಎರಡನೇ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನ 6 ವಿಕೆಟ್​​ಗಳಿಂದ ಸೋಲಿಸುವ ಮೂಲಕ 3 ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಭಾರತಕ್ಕೆ ಆಸ್ಟ್ರೇಲಿಯಾ 195 ರನ್​ಗಳ ಟಾರ್ಗೆಟ್ ನೀಡ್ತು. ಇದನ್ನ ಬೆನ್ನಟ್ಟಿದ ಭಾರತದ ಬ್ಯಾಟ್ಸ್​ಮನ್​ಗಳು ಇನ್ನು 2 ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಭಾರತದ ಪರ ಹಾರ್ದಿಕ್ ಪಾಂಡ್ಯ ಮತ್ತು ಶ್ರೇಯಸ್ ಐಯ್ಯರ್ ಅಜೇಯರಾಗಿ ಉಳಿದು ಪಂದ್ಯವನ್ನ ಗೆಲ್ಲಿಸಿಕೊಟ್ರು. ಪಾಂಡ್ಯ 22 ಬಾಲ್​​ಗಳಲ್ಲಿ 42 ರನ್ ಸಿಡಿಸಿದ್ರೆ, ಐಯ್ಯರ್ 5 ಬಾಲ್​ಗಳಲ್ಲಿ 12 ರನ್ ಬಾರಿಸಿ ಮ್ಯಾಚ್ ಗೆಲ್ಲಿಸಿದ್ರು. ಉಳಿದಂತೆ ಕೆ.ಎಲ್​. ರಾಹುಲ್ 30, ಧವನ್ 52 ಮತ್ತು ವಿರಾಟ್​ ಕೊಹ್ಲಿ 40 ರನ್ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಹಾರ್ದಿಕ್ ಪಾಂಡ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದ್ರು.

ಆಸ್ಟ್ರೇಲಿಯಾ: 194/5 (20 ಓವರ್)

ಭಾರತ: 195/4 (19.4 ಓವರ್)

-masthmagaa.com

Contact Us for Advertisement

Leave a Reply