masthmagaa.com:

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 78,357 ಮಂದಿಗೆ ಸೋಂಕು ತಗುಲಿದೆ. ಜೊತೆಗೆ 1,045ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 37,69,523ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ 66,333ಕ್ಕೆ ಏರಿಕೆಯಾಗಿದೆ. 29,01,908 ಮಂದಿ ಈವರೆಗೆ ಗುಣಮುಖರಾಗಿದ್ದು, 8,01,282 ಮಂದಿ ಇನ್ನೂ ಕೂಡ ದೇಶದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ. ದೇಶದಲ್ಲಿ ಗುಣಮುಖ ಪ್ರಮಾಣ ಶೇ.76.98 ಇದ್ದು, ಸಾವಿನ ಪ್ರಮಾಣ ಶೇ.1.76ರಷ್ಟಿದೆ. ಇನ್ನು ನಿನ್ನೆ ಒಂದೇ ದಿನ 10,12,367 ಲಕ್ಷ ಸ್ಯಾಂಪಲ್​​ಗಳ ಪರೀಕ್ಷೆ ನಡೆಸಲಾಗಿದೆ.

-masthmagaa.com

Contact Us for Advertisement

Leave a Reply