masthmagaa.com:

ಭಾರತದಲ್ಲಿ ಕೋರೋನಾ ವೈರಸ್​ ಪೀಕ್ ಹಂತ ಅಂದ್ರೆ ಗರಿಷ್ಠ ಮಟ್ಟವನ್ನು ತಲುಪಿದೆ. ಹೀಗಾಗಿ ನಿಯಮಗಳನ್ನು ಸರಿಯಾಗಿ ಪಾಲಿಸಿದ್ರೆ ಫೆಬ್ರವರಿ ಅಂತ್ಯದೊಳಗೆ ಮಹಾಮಾರಿಯನ್ನು ಕಂಪ್ಲೀಟಾಗಿ ಕಂಟ್ರೋಲ್ ಮಾಡ್ಬೋದು ಅಂತ ಕೇಂದ್ರ ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ಭಾನುವಾರ ಹೇಳಿತ್ತು. ಇದರ ಬೆನ್ನಲ್ಲೇ ದೇಶದಲ್ಲಿ ಮತ್ತೆ ಕಡಿಮೆ ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಕಳೆದ 24 ಗಂಟೆಗಳಲ್ಲಿ 55,722 ಜನರಿಗೆ ಹೊಸದಾಗಿ ಸೋಂಕು ದೃಢಪಟ್ಟಿದ್ದು, 579 ಸೋಂಕಿತರು ಮೃತಪಟ್ಟಿದ್ದಾರೆ. ಕಳೆದ ತಿಂಗಳಿಗೆ ಹೋಲಿಸಿದ್ರೆ ಇದು ತುಂಬಾ ಕಮ್ಮಿ. ಯಾಕಂದ್ರೆ ಕಳೆದ ತಿಂಗಳು ದಿನವೊಂದಕ್ಕೆ 90,000ಕ್ಕೂ ಹೆಚ್ಚು ಪ್ರಕರಣಗಳು ದೃಢಪಡುತ್ತಿತ್ತು, ಸಾವಿರಕ್ಕೂ ಹೆಚ್ಚು ಸೋಂಕಿತರು ಸಾವನ್ನಪ್ಪುತ್ತಿದ್ದರು.

ಸದ್ಯ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಮುಕ್ಕಾಲೂಕೋಟಿ ಅಂದ್ರೆ 75 ಲಕ್ಷ  ದಾಟಿದ್ದು, 75.50 ಲಕ್ಷ ಆಗಿದೆ. ಕೊರೋನಾಗೆ ಬಲಿಯಾದವರ ಸಂಖ್ಯೆ 1.14 ಲಕ್ಷ ದಾಟಿದೆ. ಕಳೆದ 24 ಗಂಟೆಗಳಲ್ಲಿ 66,000+ ಸೋಂಕಿತರು ಗುಣಮುಖರಾಗಿದ್ದು ಒಟ್ಟು ಗುಣಮುಖರಾದವರ ಸಂಖ್ಯೆ 66.63 ಲಕ್ಷ ದಾಟಿದೆ. ದೇಶದಲ್ಲಿ ಇನ್ನೂ ಕೂಡ 7.72 ಲಕ್ಷ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತದಲ್ಲಿ ಗುಣಮುಖ ಪ್ರಮಾಣ 88.26% ಇದ್ದು, ಸಾವಿನ ಪ್ರಮಾಣ 1.52% ಇದೆ. ಅಕ್ಟೋಬರ್ 18ರಂದು 9.50 ಲಕ್ಷ ಕೊರೋನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಮೂಲಕ ಒಟ್ಟು 8.59 ಕೋಟಿ ಪರೀಕ್ಷೆಗಳನ್ನು ನಡೆಸಿದಂತಾಗಿದೆ.

-masthmagaa.com

Contact Us for Advertisement

Leave a Reply