masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 77,266 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು ಹೊಸ ದಾಖಲೆ ಬರೆದಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲಿ ಇದುವರೆಗಿನ ಹೈಯೆಸ್ಟ್ ನಂಬರ್ ಇದು. ಜುಲೈ 16ರಂದು ಅಮೆರಿಕದಲ್ಲಿ 77,255 ಜನರಿಗೆ ಸೋಂಕು ತಗುಲಿತ್ತು. ಇದೀಗ ಭಾರತದಲ್ಲಿ 77,266 ಪ್ರಕರಣಗಳು ದೃಢಪಟ್ಟಿದೆ. ದೇಶದಲ್ಲಿ ಸದ್ಯ ಒಟ್ಟು ಸೋಂಕಿತರ ಸಂಖ್ಯೆ 33.87 ಲಕ್ಷ ದಾಟಿದೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,057 ಸೋಂಕಿತರು ಮೃತಪಟ್ಟಿದ್ದು ಒಟ್ಟು ಮೃತಪಟ್ಟವರ ಸಂಖ್ಯೆ 61,529 ಆಗಿದೆ. ಹೊಸದಾಗಿ 60,000+ ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 25.83 ಲಕ್ಷ ದಾಟಿದ್ದು, 7.42 ಲಕ್ಷ ಸೋಂಕಿತರು ಇನ್ನೂ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತದಲ್ಲಿ ಗುಣಮುಖ ಪ್ರಮಾಣ 76.30% ಇದ್ದು, ಸಾವಿನ ಪ್ರಮಾಣ 1.80% ಇದೆ. ಆಗಸ್ಟ್​ 27ರಂದು ದೇಶದಲ್ಲಿ 9.01 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ 3.94 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷೆ ಮಾಡಲಾಗಿದೆ ಅಂತ ಐಸಿಎಂಆರ್ ತಿಳಿಸಿದೆ.

ರಾಜ್ಯವಾರು ಸಕ್ರಿಯ ಪ್ರಕರಣ (ಟಾಪ್-10):

1. ಮಹಾರಾಷ್ಟ್ರ: 1.78 ಲಕ್ಷ ಪ್ರಕರಣ (23,400+ ಸಾವು)

2. ಆಂಧ್ರಪ್ರದೇಶ: 94,000+ ಪ್ರಕರಣ (3,600+ ಸಾವು)

3. ಕರ್ನಾಟಕ: 85,000+ ಪ್ರಕರಣ (5,200+ ಸಾವು)

4. ತಮಿಳುನಾಡು: 52,000+ ಪ್ರಕರಣ (6,900+ ಸಾವು)

5. ಉತ್ತರಪ್ರದೇಶ: 52,000+ ಪ್ರಕರಣ (3,200+ ಸಾವು)

6. ತೆಲಂಗಾಣ: 28,000+ ಪ್ರಕರಣ (799 ಸಾವು)

7. ಪಶ್ಚಿಮ ಬಂಗಾಳ: 26,000+ ಪ್ರಕರಣ (3,000+ ಸಾವು)

8. ಒಡಿಶಾ: 25,000+ ಪ್ರಕರಣ (448 ಸಾವು)

9. ಕೇರಳ: 22,000+ ಪ್ರಕರಣ (267 ಸಾವು)

10. ಅಸ್ಸಾಂ: 19,000+ ಪ್ರಕರಣ (278 ಸಾವು)

-masthmagaa.com

Contact Us for Advertisement

Leave a Reply