masthmagaa.com:

ಕೊರೋನಾ ಹಾವಳಿಯಿಂದ ಬಂದ್ ಆಗಿರುವ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಡಿಸೆಂಬರ್ 31ರವೆಗೂ ಬಂದ್ ಆಗಿರಲಿದೆ ಅಂತ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಪ್ರಕಟಣೆ ಹೊರಡಿಸಿದೆ. ಇದರ ಪ್ರಕಾರ ಕಾರ್ಗೋ ಅಥವಾ ಸರಕು ವಿಮಾನ ಹೊರತುಪಡಿಸಿ, ಕೇಸ್​ ಟು ಕೇಸ್ ಬೇಸಿಸ್ ಮೇಲೆ ಡಿಜಿಸಿಎ ಅನುಮತಿ ನೀಡಿರುವ ವಿಮಾನಗಳನ್ನ ಹೊರತುಪಡಿಸಿ ಬೇರೆ ಯಾವುದೇ ವಿಮಾನ ಭಾರತದಿಂದ ವಿದೇಶಕ್ಕೆ ಹಾರಾಟ ನಡೆಸುವಂತಿಲ್ಲ ಮತ್ತು ವಿದೇಶದಿಂದ ಯಾವುದೇ ವಿಮಾನ ಭಾರತದಲ್ಲಿ ಲ್ಯಾಂಡ್ ಆಗುವಂತಿಲ್ಲ. ಡಿಸೆಂಬರ್ 31ರವರೆಗೆ ಈ ನಿಯಮ ಜಾರಿಯಲ್ಲಿರುತ್ತೆ. ಅಂದ್ಹಾಗೆ ಭಾರತ ಕೆಲವೊಂದು ದೇಶಗಳೊಂದಿಗೆ ಏರ್​ ಬಬಲ್ ವ್ಯವಸ್ಥೆ ಅಡಿಯಲ್ಲಿ ವಿಮಾನ ಸಂಚಾರ ಆರಂಭಿಸಿದೆ. ಇಂತಹ ವಿಮಾನಗಳು, ವಂದೇ ಭಾರತ್ ಮಿಷನ್ ಅಡಿಯಲ್ಲಿ ಸಂಚರಿಸುತ್ತಿರುವ ವಿಮಾನಗಳು ಮತ್ತು ವಿಶೇಷ ವಿಮಾನಗಳಿಗೆ ಇದರಿಂದ ವಿನಾಯ್ತಿ ನೀಡಲಾಗಿದೆ. ಅವು ಎಂದಿನಂತೆ ಕಾರ್ಯನಿರ್ವಹಿಸಲಿವೆ.

-masthmagaa.com

Contact Us for Advertisement

Leave a Reply