ಸೇಡು ತೀರಿಸಿಕೊಂಡ ಭಾರತ.. 2ನೇ ಟೆಸ್ಟ್​ನಲ್ಲಿ ಗೆಲುವು.. ಅಶ್ವಿನ್​ ದಾಖಲೆ

masthmagaa.com:

ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಸೋತಿದ್ದ ಟೀಂ ಇಂಡಿಯಾ ಎರಡನೇ ಟೆಸ್ಟ್​ ಗೆದ್ದು ತಿರುಗೇಟು ಕೊಟ್ಟಿದೆ. 2ನೇ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾವನ್ನ ಭರ್ಜರಿ 8 ವಿಕೆಟ್​ಗಳಿಂದ ಮಣಿಸಿ 4 ಪಂದ್ಯಗಳ ಸರಣಿಯನ್ನ 1-1ರಲ್ಲಿ ಸಮಬಲ ಮಾಡಿಕೊಂಡಿದೆ. ಎರಡನೇ ಇನ್ನಿಂಗ್ಸ್​ನಲ್ಲಿ ನಿನ್ನೆ 133 ರನ್​ಗೆ 6 ವಿಕೆಟ್​​ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ಇವತ್ತು 200 ರನ್​ಗೆ ಆಲೌಟ್​ ಆಯ್ತು. ಇದರಿಂದ ಭಾರತಕ್ಕೆ 70 ರನ್​ಗಳ ಟಾರ್ಗೆಟ್ ಸಿಕ್ತು. ಬ್ಯಾಟಿಂಗ್​ಗೆ ಇಳಿದ ಭಾರತ ಆರಂಭದಲ್ಲಿ ಮಯಾಂಕ್ ಅಗರ್​ವಾಲ್ ಮತ್ತು ಚೇತೇಶ್ವರ ಪೂಜಾರಾ ವಿಕೆಟ್​ ಕಳೆದುಕೊಳ್ತು. ಕೊನೆಗೆ ಶುಬ್​ಮನ್​ ಗಿಲ್ ಮತ್ತು ನಾಯಕ ಅಜಿಂಕ್ಯ ರಹಾನೆ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಮೊದಲ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ರಹಾನೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ್ರು. ಇನ್ನು ಟೆಸ್ಟ್​ ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ಲೆಫ್ಟ್-ಹ್ಯಾಂಡ್​ ಬ್ಯಾಟ್ಸ್​ಮನ್​ಗಳ ವಿಕೆಟ್ ಪಡೆದ ದಾಖಲೆ ಮಾಡಿದ್ರು ಆರ್. ಅಶ್ವಿನ್.  ಈ ಹಿಂದೆ ಶ್ರೀಲಂಕಾದ ಮುತ್ತಯ್ಯ ಮುರುಳಿಧರನ್ 191 ಲೆಫ್ಟ್​-ಹ್ಯಾಂಡರ್​​ಗಳ ವಿಕೆಟ್ ಪಡೆದಿದ್ರು. ಈಗ ಅಶ್ವಿನ್​ 192 ವಿಕೆಟ್ ಪಡೆದಿದ್ದಾರೆ. ಭಾರತ-ಆಸ್ಟ್ರೇಲಿಯಾ ನಡುವೆ ಸಿಡ್ನಿಯಲ್ಲಿ ಜನವರಿ 7ರಿಂದ 3ನೇ ಟೆಸ್ಟ್ ಆರಂಭವಾಗಲಿದೆ. ಸಿಡ್ನಿಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗ್ತಿರುವ ಹಿನ್ನೆಲೆ ಈ ಪಂದ್ಯ ಮೆಲ್ಬೊರ್ನ್​ಗೆ ಶಿಫ್ಟ್ ಆಗುವ ಸಾಧ್ಯತೆ ಇದೆ ಎನ್ನಲಾಗ್ತಿತ್ತು. ಆದ್ರೆ ಕ್ರಿಕೆಟ್​ ಆಸ್ಟ್ರೇಲಿಯಾ ಮಾತ್ರ 3ನೇ ಟೆಸ್ಟ್ ಸಿಡ್ನಿಯಲ್ಲೇ ನಡೆಯಲಿದೆ ಅಂತ ಸ್ಪಷ್ಟಪಡಿಸಿದೆ.

ಇನ್ನು ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವೆ ನಡೆದ ಮೊದಲ ಟೆಸ್ಟ್​ನಲ್ಲಿ ಶ್ರೀಲಂಕಾ ತಂಡವನ್ನ ದಕ್ಷಿಣ ಆಫ್ರಿಕಾ ಇನ್ನಿಂಗ್ಸ್​ ಮತ್ತು 45 ರನ್​ಗಳಿಂದ ಸೋಲಿಸಿದೆ.

-masthmagaa.com

Contact Us for Advertisement

Leave a Reply