masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 52,509 ಜನರಿಗೆ ಹೊಸದಾಗಿ ಸೋಂಕು ತಗುಲಿದ್ದು, 857 ಮಂದಿ ಮೃತಪಟ್ಟಿದ್ದಾರೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ ಬರೋಬ್ಬರಿ 19.08 ಲಕ್ಷ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 39,795 ಆಗಿದೆ. 

ಕಳೆದ 24 ಗಂಟೆಗಳಲ್ಲಿ ದಾಖಲೆಯ 51,706 ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ ಒಟ್ಟು 12.82 ಲಕ್ಷ ಸೋಂಕಿತರು ಗುಣಮುಖರಾದಂತಾಗಿದ್ದು 5.86 ಲಕ್ಷ ಸೋಂಕಿತರು ಇನ್ನೂ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶದಲ್ಲಿ ಗುಣಮುಖ ಪ್ರಮಾಣ 67.19 ಪರ್ಸೆಂಟ್ ಇದೆ. ಸಾವಿನ ಪ್ರಮಾಣ 2.09 ಪರ್ಸೆಂಟ್ ಇದೆ. ಆಗಸ್ಟ್​ 4ರಂದು 6.19 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ ಒಟ್ಟು 2.14 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷೆ ಮಾಡಲಾಗಿದೆ ಅಂತ ಐಸಿಎಂಆರ್ ಹೇಳಿದೆ.

ರಾಜ್ಯವಾರು ಸಕ್ರಿಯ ಪ್ರಕರಣ (ಟಾಪ್-10):

1. ಮಹಾರಾಷ್ಟ್ರ: 1.42 ಲಕ್ಷ ಪ್ರಕರಣ (16,000+ ಸಾವು)

2. ಆಂಧ್ರಪ್ರದೇಶ: 79,000+ ಪ್ರಕರಣ (1,600+ ಸಾವು)

3. ಕರ್ನಾಟಕ: 73,000+ ಪ್ರಕರಣ (2,700+ ಸಾವು)

4. ತಮಿಳುನಾಡು: 55,000+ ಪ್ರಕರಣ (4,300+ ಸಾವು)

5. ಉತ್ತರಪ್ರದೇಶ: 41,000+ ಪ್ರಕರಣ (1,800+ ಸಾವು)

6. ಪಶ್ಚಿಮ ಬಂಗಾಳ: 22,000+ ಪ್ರಕರಣ (1,700+ ಸಾವು)

7. ಬಿಹಾರ: 21,000+ ಪ್ರಕರಣ (347 ಸಾವು)

8. ತೆಲಂಗಾಣ: 19,000+ ಪ್ರಕರಣ (576 ಸಾವು)

9. ಗುಜರಾತ್: 14,000+ ಪ್ರಕರಣ (2,500+ ಸಾವು)

10. ಅಸ್ಸಾಂ: 13,000+ ಪ್ರಕರಣ (115 ಸಾವು)

-masthmagaa.com

Contact Us for Advertisement

Leave a Reply