masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 49,931 ಜನರಿಗೆ ಹೊಸದಾಗಿ ಸೋಂಕು ತಗುಲಿದ್ದು, 708 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 14 ಲಕ್ಷದ ಗಡಿ ದಾಟಿದ್ದು 14,35,453 ಆಗಿದೆ. ಮೃತಪಟ್ಟವರ ಸಂಖ್ಯೆ 32,771ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸತತ 4 ದಿನಗಳಿಂದ 48 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ.

ಕಳೆದ 24 ಗಂಟೆಗಳಲ್ಲಿ 31,991 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು 9,17,568 ಸೋಂಕಿತರು ಗುಣಮುಖರಾದಂತಾಗಿದ್ದು 4,85,114 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯವಾರು ಸೋಂಕಿತರ ಪಟ್ಟಿಯಲ್ಲಿ ಕಳೆದ ಹಲವು ದಿನಗಳಿಂದ 4ನೇ ಸ್ಥಾನದಲ್ಲಿದ್ದ ಕರ್ನಾಟಕ ಈಗ 5ನೇ ಸ್ಥಾನಕ್ಕೆ ಬಂದಿದೆ. ಹಾಗಂತ ಕರ್ನಾಟಕದಲ್ಲಿ ಸೋಂಕಿನ ಹಾವಳಿ ಕಡಿಮೆಯಾಯ್ತು ಅಂತ ಅರ್ಥವಲ್ಲ. ಕರ್ನಾಟಕಕ್ಕಿಂತ ಆಂಧ್ರಪ್ರದೇಶದಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ. ಎರಡೂ ರಾಜ್ಯಗಳಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1 ಲಕ್ಷ ಸಮೀಪಿಸಿದೆ.

ಜುಲೈ 26ರಂದು ದೇಶದಲ್ಲಿ ದಾಖಲೆಯ 5.15 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ ಒಟ್ಟು 1.68 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷೆ ಮಾಡಲಾಗಿದೆ ಅಂತ ಐಸಿಎಂಆರ್ ಹೇಳಿದೆ.

ಕೊರೋನಾ ಪೀಡಿತ ಟಾಪ್​-10 ರಾಜ್ಯಗಳು:

1. ಮಹಾರಾಷ್ಟ್ರ: 3.75 ಲಕ್ಷ ಪ್ರಕರಣ (13,656 ಸಾವು)

2. ತಮಿಳುನಾಡು: 2.13 ಲಕ್ಷ ಪ್ರಕರಣ (3,494 ಸಾವು)

3. ದೆಹಲಿ: 1.30 ಲಕ್ಷ ಪ್ರಕರಣ (3,827 ಸಾವು)

4. ಆಂಧ್ರಪ್ರದೇಶ: 96,298 ಪ್ರಕರಣ (1,041 ಸಾವು)

5. ಕರ್ನಾಟಕ: 96,141 ಪ್ರಕರಣ (1,878 ಸಾವು)

6. ಉತ್ತರಪ್ರದೇಶ: 66,000+ ಪ್ರಕರಣ (1,426 ಸಾವು)

7. ಪಶ್ಚಿಮ ಬಂಗಾಳ: 58,000+ ಪ್ರಕರಣ (1,372 ಸಾವು)

8. ಗುಜರಾತ್: 55,000+ ಪ್ರಕರಣ (2,326 ಸಾವು)

9. ತೆಲಂಗಾಣ: 54,000+ ಪ್ರಕರಣ (463 ಸಾವು)

10. ಬಿಹಾರ: 39,000+ ಪ್ರಕರಣ (244 ಸಾವು)

-masthmagaa.com

Contact Us for Advertisement

Leave a Reply