ದೇಶದಲ್ಲಿ ಒಂದೇ ದಿನ 51,000+ ಜನ ಗುಣಮುಖ.. ಯಾವ ರಾಜ್ಯದಲ್ಲಿ ಎಷ್ಟು ಗೊತ್ತಾ..?

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 54,736 ಜನರಿಗೆ ಹೊಸದಾಗಿ ಸೋಂಕು ತಗುಲಿದ್ದು, 853 ಮಂದಿ ಮೃತಪಟ್ಟಿದ್ದಾರೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 17,50,724 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 37,364 ಆಗಿದೆ.

ಕಳೆದ 24 ಗಂಟೆಗಳಲ್ಲಿ ದಾಖಲೆಯ 51,255 ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಂಧ್ರಪ್ರದೇಶದಲ್ಲಿ 12,000+, ಮಹಾರಾಷ್ಟ್ರದಲ್ಲಿ 10,000+, ತಮಿಳುನಾಡಿನಲ್ಲಿ 7,000+, ಕರ್ನಾಟಕದಲ್ಲಿ 3,000+ ಸೋಂಕಿತರು ಒಂದೇ ದಿನ ಗುಣಮುಖರಾಗಿದ್ದಾರೆ.

ದೇಶದಲ್ಲಿ ಇದುವರೆಗೆ ಒಟ್ಟು 11,45,630 ಸೋಂಕಿತರು ಗುಣಮುಖರಾದಂತಾಗಿದ್ದು 5,67,730 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖ ಪ್ರಮಾಣ 65.44 ಪರ್ಸೆಂಟ್ ಇದೆ. ಸಾವಿನ ಪ್ರಮಾಣ 2.13 ಪರ್ಸೆಂಟ್ ಇದೆ. ಆಗಸ್ಟ್​ 1ರಂದು 4.63 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ ಒಟ್ಟು 1.98 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷೆ ಮಾಡಲಾಗಿದೆ ಅಂತ ಐಸಿಎಂಆರ್ ಹೇಳಿದೆ.

ರಾಜ್ಯವಾರು ಸಕ್ರಿಯ ಪ್ರಕರಣ (ಟಾಪ್-10):

1. ಮಹಾರಾಷ್ಟ್ರ: 1.49 ಲಕ್ಷ ಪ್ರಕರಣ (15,000+ ಸಾವು)

2. ಕರ್ನಾಟಕ: 73,000+ ಪ್ರಕರಣ (2,400+ ಸಾವು)

3. ಆಂಧ್ರಪ್ರದೇಶ: 72,000+ ಪ್ರಕರಣ (1,400+ ಸಾವು)

4. ತಮಿಳುನಾಡು: 56,000+ ಪ್ರಕರಣ (4,000+ ಸಾವು)

5. ಉತ್ತರಪ್ರದೇಶ: 36,000+ ಪ್ರಕರಣ (1,600+ ಸಾವು)

6. ಪಶ್ಚಿಮ ಬಂಗಾಳ: 20,000+ ಪ್ರಕರಣ (1,600+ ಸಾವು)

7. ಬಿಹಾರ: 18,000+ ಪ್ರಕರಣ (309 ಸಾವು)

8. ತೆಲಂಗಾಣ: 17,000+ ಪ್ರಕರಣ (530 ಸಾವು)

9. ಗುಜರಾತ್: 14,000+ ಪ್ರಕರಣ (2,400+ ಸಾವು)

10. ಒಡಿಶಾ: 12,000+ ಪ್ರಕರಣ (187 ಸಾವು)

-masthmagaa.com

Contact Us for Advertisement

Leave a Reply