masthmagaa.com:

ಇಂಡೋನೇಷ್ಯಾ ಸರ್ಕಾರ ತನ್ನ ಜನತೆಗೆ ಕೊರೋನಾ ಲಸಿಕೆ ಹಾಕಲು ತಯಾರಿ ನಡೆಸುತ್ತಿರುವಾಗಲೇ ಚೀನಾದ ಸಿನೋವ್ಯಾಕ್ ಬಯೋಟೆಕ್ ಲಿಮಿಟೆಡ್​ ಅಭಿವೃದ್ಧಿಪಡಿಸಿರುವ ಲಸಿಕೆಯ ಮೊದಲ ಶಿಪ್​ಮೆಂಟ್ ಇಂಡೋನೇಷ್ಯಾ ತಲುಪಿದೆ. ಇದನ್ನ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ತಿಳಿಸಿದ್ದಾರೆ. ಇವರು ಜೋಕೋವಿ ಅಂತಾನೇ ಫೇಮಸ್. ಮೊದಲ ಶಿಪ್​ಮೆಂಟ್​ನಲ್ಲಿ ಸಿನೋವ್ಯಾಕ್ ಲಸಿಕೆಯ 12 ಲಕ್ಷ  ಡೋಸ್​ಗಳು ಬಂದಿದ್ದು, ಜನವರಿಯಲ್ಲಿ ಇನ್ನೂ 18 ಲಕ್ಷ ಡೋಸ್​ಗಳನ್ನ ಖರೀದಿಸುವ ಪ್ಲಾನ್ ಮಾಡಲಾಗಿದೆ. ಆದ್ರೆ ಈ ಲಸಿಕೆಗೆ ಅಲ್ಲಿನ ಔಷಧ ನಿಯಂತ್ರಣ ಪ್ರಾಧಿಕಾರ ಇನ್ನೂ ಅನುಮತಿ ನೀಡಿಲ್ಲ. ಚೀನಾದ ಈ ಲಸಿಕೆ ಎಷ್ಟು ಸುರಕ್ಷಿತ ಅನ್ನೋದು ಕೂಡ ದೃಢಪಟ್ಟಿಲ್ಲ. ಇಂಡೋನೇಷ್ಯಾದಲ್ಲಿ ಆಗಸ್ಟ್​ನಿಂದ ಈ ಲಸಿಕೆಯ ಪ್ರಯೋಗ ನಡೆಯುತ್ತಿದೆ. ಬ್ರೆಜಿಲ್ ಮತ್ತು ಟರ್ಕಿಯಲ್ಲಿ ಕೊನೇ ಹಂತದ ಮಾನವ ಪ್ರಯೋಗ ನಡೆಯುತ್ತಿದ್ದ ಶೀಘ್ರದಲ್ಲಿ ಅದರ ಮಧ್ಯಂತರ ವರದಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply