ಕೊರೋನಾ ಸೋಂಕು ಹರಡಿ ಎಂದವನು ಅರೆಸ್ಟ್.. ಕೆಲಸವೂ ಹೋಯ್ತು

masthmagaa.com:

ಮನೆಯಿಂದ ಹೊರಗೆ ಬಂದು ಸೀನುವುದರ ಮೂಲಕ ಕೊರೋನಾ ಸೋಂಕು ಹರಡಿ ಅಂತ ಫೇಸ್​ಬುಕ್​ನಲ್ಲಿ ಬರೆದುಕೊಂಡು ವಿಕೃತಿ ಮೆರೆದಿದ್ದ ಸಾಫ್ಟ್​ವೇರ್ ಇಂಜಿನಿಯರ್​ ಮುಜೀಬ್ ಮೊಹಮ್ಮದ್ ಎಂಬಾತನನ್ನ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತನ ಲ್ಯಾಪ್​ಟಾಪ್ ಹಾಗೂ ಮೊಬೈಲ್​ ಫೋನನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಆರೋಪಿ ಮುಜೀಬ್ ಮೊಹಮ್ಮದ್​​ ಇನ್ಫೋಸಿಸ್​ ಕಂಪನಿ ಉದ್ಯೋಗಿಯಾಗಿದ್ದಾನೆ. ಈ ಬಗ್ಗೆ ಟ್ವಿಟ್ಟರ್​ನಲ್ಲಿ ಪ್ರತಿಕ್ರಿಯಿಸಿರೋ ಇನ್ಫೋಸಿಸ್​, ‘ಸೋಷಿಯಲ್ ಮೀಡಿಯಾ ಪೋಸ್ಟ್​ ಬಗ್ಗೆ ಕಂಪನಿಯು ತನಿಖೆ ಪೂರ್ಣಗೊಳಿಸಿದೆ. ಈ ವೇಳೆ ಇದೊಂದು ಉದ್ದೇಶಪೂರ್ವಕ ಕೃತ್ಯ ಅನ್ನೋದು ಗೊತ್ತಾಗಿದೆ’ ಅಂತ ಹೇಳಿದೆ. ಅಲ್ಲದೆ ಮುಜೀಬ್​ ಮೊಹಮ್ಮದ್​​ನನ್ನು ಕೆಲಸದಿಂದ ತೆಗೆದು ಹಾಕಿರೋದಾಗಿ ತಿಳಿಸಿದೆ.

-masthmagaa.com

Contact Us for Advertisement

Leave a Reply