masthmagaa.com:

ಇಸ್ರೇಲ್​ನಲ್ಲಿ ಕೊರೋನಾ ಲಸಿಕೆಯ ಮೊದಲ ಡೋಸನ್ನು ಸ್ವತಃ ಅಲ್ಲಿನ ಪ್ರಧಾನಿ ಬೆಂಜಮಿನ್​ ನೇತನ್ಯಾಹು ಹಾಕಿಸಿಕೊಂಡಿದ್ದಾರೆ. ನೇತನ್ಯಾಹುಗೆ ಫೈಝರ್ ಲಸಿಕೆ ಹಾಕಲಾಗಿದೆ. ಲಸಿಕೆ ಹಾಕೋದನ್ನ ಟಿವಿಯಲ್ಲಿ ಲೈವ್ ತೋರಿಸಲಾಯ್ತು. ಈ ಮೂಲಕ 71 ವರ್ಷದ ನೇತನ್ಯಾಹು ಲಸಿಕೆ ಹಾಕಿಸಿಕೊಂಡ ವಿಶ್ವ ನಾಯಕರ ಪಟ್ಟಿಗೆ ಸೇರಿದ್ದಾರೆ. ಇತ್ತೀಚೆಗೆ ಅಮೆರಿಕದ ಉಪಾಧ್ಯಕ್ಷ ಮೈಕ್​ ಪೆನ್ಸ್ ​​ಕೂಡ ಲಸಿಕೆ ಹಾಕಿಸಿಕೊಂಡಿದ್ದರು. ಪ್ರೆಸಿಡೆಂಟ್ ಎಲೆಕ್ಟ್ ಜೋ ಬೈಡೆನ್​ಗೆ ನಾಳೆ ಲಸಿಕೆ ಹಾಕುವ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply