ಇಟಲಿಯಲ್ಲಿ ಒಂದೇ ದಿನ 743 ಜನ ಸಾವು.. ಸ್ಮಶಾನದಂತಾದ ಲೊಂಬಾರ್ಡಿ..!

masthmagaa.com:

ಕೊರೋನಾ  ವೈರಸ್​ಗೆ ಜಗತ್ತಿನಲ್ಲಿ ಅತಿ ಹೆಚ್ಚು ಜನ ಮೃತಪಟ್ಟಿರೋ ಇಟಲಿಯಲ್ಲಿ ಮಂಗಳವಾರ ಒಂದೇ ದಿನ 743 ಜನ ಪ್ರಾಣ ಕಳೆದುಕೊಂಡಿದ್ದಾರೆ. ಈ ಮೂಲಕ ಇಟಲಿಯಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 6,800ಕ್ಕೆ ಏರಿಕೆಯಾಗಿದೆ. ಜೊತೆಗೆ ದೇಶದಲ್ಲಿ ಇದುವರೆಗೆ ದೃಢಪಟ್ಟ ಪ್ರಕರಣಗಳ ಸಂಖ್ಯೆ 70,000 ಗಡಿ ದಾಟಿದೆ.

ಮಾರ್ಚ್ 21, ಶನಿವಾರದಂದು ಇಟಲಿಯಲ್ಲಿ 793 ಜನ ಕೊರೋನಾದಿಂದ ಮೃತಪಟ್ಟಿದ್ದರು. ಇದು ಒಂದೇ ದಿನದಲ್ಲಿ ಅತಿ ಹೆಚ್ಚು ಜನ ಮೃತಪಟ್ಟ ದಿನವಾಗಿದೆ. ಭಾನುವಾರ 602 ಹಾಗೂ ಸೋಮವಾರ 650 ಜನ ಮೃತಪಟ್ಟಿದ್ದರು. ಈ ಮೂಲಕ ಸಾವಿನ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಂಡಿತ್ತು. ಆದ್ರೀಗ ಮಂಗಳವಾರ ಮತ್ತೆ 743 ಜನ ಪ್ರಾಣ ಕಳೆದುಕೊಂಡಿರೋದು ಆತಂಕ ಹೆಚ್ಚಾಗುವಂತೆ ಮಾಡಿದೆ.

ಅದರಲ್ಲೂ ಇಟಲಿಯ ಲೊಂಬಾರ್ಡಿ ಪ್ರದೇಶವೊಂದರಲ್ಲೇ 4,000ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 30 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ.

-masthmagaa.com

Contact Us for Advertisement

Leave a Reply