ಉತ್ತರ ಕರ್ನಾಟಕ ಆಯ್ತು.. ಈಗ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ

masthmagaa.com:

ನಿನ್ನೆ ತೆಲಂಗಾಣದಲ್ಲಿ ಕೇಂದ್ರೀಕೃತವಾಗಿದ್ದ ವಾಯುಭಾರ ಕುಸಿತ ಇವತ್ತು ಉತ್ತರ ಕರ್ನಾಟಕ ದಾಟಿ ಮಹಾರಾಷ್ಟ್ರದತ್ತ ಅಂದ್ರೆ ಪಶ್ಚಿಮದತ್ತ ಸಾಗಿದೆ ಅಂತ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಉತ್ತರ ಕರ್ನಾಟಕದ ಕಲಬುರಗಿ, ರಾಯಚೂರು ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.

ಈ ವಾಯುಭಾರ ಕುಸಿತವು ಅಕ್ಟೋಬರ್ 16ರಂದು ಮಹಾರಾಷ್ಟ್ರ ಕರಾವಳಿಯಲ್ಲಿ ದುರ್ಬಲಗೊಳ್ಳುವ ಸಾಧ್ಯತೆ ಇದೆ. ಇದರ ನಡುವೆ ಅಕ್ಟೋಬರ್ 15ರಂದು ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಗೋವಾ, ಮಧ್ಯ ಮಹಾರಾಷ್ಟ್ರ, ದಕ್ಷಿಣ ಗುಜರಾತ್​ನಲ್ಲಿ ಭಾರಿ ಮಳೆಯಾಗಲಿದೆ ಅಂತ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

-masthmagaa.com

Contact Us for Advertisement

Leave a Reply