ಅಮೆರಿಕದಲ್ಲಿ ಹೈಡ್ರಾಮಾ: ‘ಟ್ರಂಪ್ 2ನೇ ಅವಧಿಗೆ ಆಯ್ಕೆಯಾಗ್ತಾರೆ’

masthmagaa.com:

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಧಿಕೃತ ಫಲಿತಾಂಶ ಪ್ರಕಟವಾಗದಿದ್ದರೂ ಮ್ಯಾಜಿಕ್ ನಂಬರ್ ದಾಟಿರುವ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋಸೆಫ್ ಬೈಡೆನ್​ ಅವರೇ ಅಮೆರಿಕದ ಮುಂದಿನ ಅಧ್ಯಕ್ಷ ಅಂತ ಹೇಳಲಾಗ್ತಿದೆ. ಈಗ ಅವರನ್ನ ಪ್ರೆಸಿಡೆಂಟ್-ಎಲೆಕ್ಟ್ ಅಂತ ಕರೀತಾರೆ. ಆದ್ರೆ ಬೈಡೆನ್ ಗೆಲುವನ್ನ ಡೊನಾಲ್ಡ್ ಟ್ರಂಪ್ ಮತ್ತು ಅವರ ಕ್ಯಾಂಪ್ ಒಪ್ಪುತ್ತಿಲ್ಲ. ಜೊತೆಗೆ ಅಧಿಕಾರವನ್ನ ಕೂಡ ಹಸ್ತಾಂತರಿಸುತ್ತಿಲ್ಲ. ಇದೇ ಈಗ ಅಮೆರಿಕದಲ್ಲಿ ಸಾಕಷ್ಟು ಹೈಡ್ರಾಮಾಕ್ಕೆ ಕಾರಣವಾಗಿದೆ.

ಬೈಡೆನ್​ಗೆ ಯಾವಾಗ ಅಧಿಕಾರ ಹಸ್ತಾಂತರ ಮಾಡ್ತೀರಾ ಅಂತ ಅಮೆರಿಕದ ಗೃಹ ಕಾರ್ಯದರ್ಶಿ ಮೈಕ್ ಪಾಂಪಿಯೋಗೆ ಮಾಧ್ಯಮದವರು ಕೇಳಿದಾಗ, ‘ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಗೆ ಸುಗಮವಾಗಿ ಅಧಿಕಾರ ಹಸ್ತಾಂತರಿಸಲಾಗುತ್ತೆ’ ಅಂತ ಹೇಳಿದ್ದಾರೆ. ಈ ಮೂಲಕ ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಆಯ್ಕೆಯಾಗ್ತಾರೆ ಅಂತ ಪಾಂಪಿಯೊ ಹೇಳಿದ್ದಾರೆ.

ಇದೆಲ್ಲವನ್ನ ನೋಡಿ ಮಾತನಾಡಿರುವ ಜೋಸೆಫ್ ಬೈಡೆನ್, ‘ಅಧ್ಯಕ್ಷೀಯ ಚುನಾವಣೆಯಲ್ಲಾಗಿರುವ ಸೋಲನ್ನು ಡೊನಾಲ್ಡ್​ ಟ್ರಂಪ್ ಒಪ್ಪಿಕೊಳ್ಳದೇ ಇರೋದು ಮುಜುಗರದ ಸಂಗತಿ. ಆದ್ರೆ ಅಧಿಕಾರ ಹಸ್ತಾಂತರವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಅಂತ ಹೇಳಿದ್ದಾರೆ.

ಅಂದ್ಹಾಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಸ್ವಲ್ಪ ಸಮಯದವರೆಗೆ ತಡೆ ಹಿಡಿಯುವಂತೆ ಅಧಿಕಾರಿಗಳಿಗೆ ಟ್ರಂಪ್ ಸೂಚಿಸಿದ್ದಾರೆ ಅಂತ ಹೇಳಲಾಗ್ತಿದೆ. ಡೊನಾಲ್ಡ್​ ಟ್ರಂಪ್ ಅಧಿಕಾರಾವಧಿ ಜನವರಿ 20ರಂದು ಅಂತ್ಯಗೊಳ್ಳಲಿದೆ. ಚುನಾವಣೆಗೆ ಸಂಬಂಧಿಸಿದ ವಿವಾದಗಳನ್ನ ಡಿಸೆಂಬರ್ 8ರೊಳಗೆ ಬಗೆಹರಿಸಿಕೊಳ್ಳಬೇಕಿದೆ. ಅಲ್ಲಿವರೆಗೆ ಸಮಯ ಇರೋದ್ರಿಂದ ಮತ್ತು ಈಗಾಗಲೇ ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಅಂತ ಆರೋಪಿಸಿ ಕಾನೂನು ಹೋರಾಟ ನಡೆಸುತ್ತಿರೋದ್ರಿಂದ ಅಧಿಕಾರ ಹಸ್ತಾಂತರ ಮಾಡಲು ಟ್ರಂಪ್ ಹಿಂದೇಟು ಹಾಕ್ತಿದ್ದಾರೆ.

-masthmagaa.com

Contact Us for Advertisement

Leave a Reply