ತುರ್ತುಪರಿಸ್ಥಿತಿಗೆ 45 ವರ್ಷ: ಪ್ರಜಾಪ್ರಭುತ್ವ ರಕ್ಷಿಸಿದವರಿಗೆ ‘ನಮೋ’ ನಮನ

masthmagaa.com:

ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿ ಇಂದಿಗೆ 45 ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆ ಟ್ವೀಟ್ ಮಾಡಿರೋ ಪ್ರಧಾನಿ ನರೇಂದ್ರ ಮೋದಿ, ‘ಇವತ್ತಿಗೆ ಸರಿಯಾಗಿ 45 ವರ್ಷಗಳ ಹಿಂದೆ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಲಾಯ್ತು. ಆ ಸಮಯದಲ್ಲಿ ಪ್ರಜಾಪ್ರಭುತ್ವದ ರಕ್ಷಣೆಗೆ ಹೋರಾಟ ನಡೆಸಿದ, ಹಿಂಸೆ ಅನುಭವಿಸಿದ ಎಲ್ಲರಿಗೂ ನನ್ನ ನಮನಗಳು. ಅವರ ತ್ಯಾಗ ಮತ್ತು ಬಲಿದಾನವನ್ನು ದೇಶ ಯಾವತ್ತೂ ಮರೆಯೋದಿಲ್ಲ’ ಅಂತ ಹೇಳಿದ್ದಾರೆ.

ಜೂನ್​ 25, 1975ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದರು. 1977ರ ಮಾರ್ಚ್​ 21ರವರೆಗೆ ಬರೋಬ್ಬರಿ 21 ತಿಂಗಳ ಕಾಲ ತುರ್ತುಪರಿಸ್ಥಿತಿ ಇತ್ತು. ಈ ಅವಧಿಯಲ್ಲಿ ದೇಶದ ನ್ಯಾಯಾಂಗ ವ್ಯವಸ್ಥೆ, ಪತ್ರಿಕಾ ಸ್ವಾತಂತ್ರ್ಯದಿಂದ ಹಿಡಿದು ಎಲ್ಲವನ್ನೂ ಇಂದಿರಾ ಗಾಂಧಿ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದರು. ರಾಜಕೀಯ ವಿರೋಧಿಗಳನ್ನೆಲ್ಲಾ ಜೈಲಿಗೆ ಕಳಿಸಲಾಯ್ತು.

-masthmagaa.com

 

Contact Us for Advertisement

Leave a Reply