masthmagaa.com:

ಬಿಹಾರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಮೊದಲ ಗೆಲುವನ್ನು ಘೋಷಿಸಿದೆ. ದರ್ಭಂಗಾ ಗ್ರಾಮೀಣ ಕ್ಷೇತ್ರದಲ್ಲಿ ಆರ್​ಜೆಡಿ ಪಕ್ಷದ ಲಲಿತ್ ಯಾದವ್ ಜಯಭೇರಿ ಬಾರಿಸಿದ್ದಾರೆ. ಚುನಾವಣಾ ಆಯೋಗ ಘೋಷಿಸಿದ ಮೊದಲ ಗೆಲುವು ಇದಾಗಿದೆ. ಉಳಿದ ಕ್ಷೇತ್ರಗಳ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ.

ಚುನಾವಣಾ ಆಯೋಗ ಸಂಜೆ 4.30ಕ್ಕೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಎನ್​ಡಿಎ 127 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ರೆ, ಮಹಾಘಟಬಂಧನ್ 102 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದೇ ಟ್ರೆಂಡ್ ಮುಂದುವರಿದ್ರೆ ಬಿಹಾರದಲ್ಲಿ ಮತ್ತೊಮ್ಮೆ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ನಿತೀಶ್ ಕುಮಾರ್ ಮತ್ತೊಂದು ಅವಧಿಗೆ ಸಿಎಂ ಆಗಿ ಮುಂದುವರಿಯಲಿದ್ದಾರೆ.

ಒಟ್ಟು ಕ್ಷೇತ್ರಗಳು: 243

ಮ್ಯಾಜಿಕ್ ನಂಬರ್: 122

 

ಎನ್​ಡಿಎ: 127 (ಬಿಜೆಪಿ-77, ಜೆಡಿಯು-42, ವಿಐಪಿ-5, ಹೆಚ್​ಎಎಂ-3)

ಮಹಾಘಟಬಂಧನ್: 102 (ಆರ್​ಜೆಡಿ-66, ಕಾಂಗ್ರೆಸ್-18, ಎಡಪಕ್ಷಗಳು-18)

ಎಐಎಂಐಎಂ: 4

ಬಿಎಸ್​ಪಿ: 2

ಎಲ್​ಜೆಪಿ: 2

ಇತರೆ: 3

-masthmagaa.com

Contact Us for Advertisement

Leave a Reply