masthmagaa.com:

ಕೊರೋನಾ ನಡುವೆ ವಿವಿಧ ರಾಜ್ಯಗಳಲ್ಲಿ ಕಾಣಿಸಿಕೊಂಡಿರುವ ಹಕ್ಕಿಜ್ವರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಟೆನ್ಷನ್ ಹೆಚ್ಚಿಸಿವೆ. ಕೇಂದ್ರ ಸರ್ಕಾರವಂತೂ ದೆಹಲಿಯಲ್ಲಿ ಕಂಟ್ರೋಲ್ ರೂಂ ಓಪನ್ ಮಾಡಿದೆ. ಇಲ್ಲಿ ಹಕ್ಕಿಜ್ವರ ಹರಡುವುದನ್ನ ನಿಯಂತ್ರಿಸಲು ಮತ್ತು ತಡೆಗಟ್ಟಲು ರಾಜ್ಯ ಸರ್ಕಾರಗಳು ತೆಗೆದುಕೊಳ್ಳುವ ಕ್ರಮಗಳನ್ನ ಪರಿಶೀಲಿಸಲಾಗುತ್ತೆ.

ಇನ್ನು ಹಕ್ಕಿ ಜ್ವರ ಮನುಷ್ಯರಿಗೂ ಹರಡುತ್ತೆ. ಆದ್ರೆ ಇದುವರೆಗೆ ದೇಶದಲ್ಲಿ ಮನುಷ್ಯರಿಗೆ ಈ ವೈರಾಣು ಹರಡಿರುವ ಯಾವುದೇ ಪ್ರಕರಣ ವರದಿಯಾಗಿಲ್ಲ. ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಹೀಗಾಗಿ ಕೋಳಿ ಸೇರಿದಂತೆ ಪಕ್ಷಿಗಳ ಸಾಗಾಟದ ಮೇಲೆ ನಿರ್ಬಂಧಿ ವಿಧಿಸಿ, ಅಗತ್ಯಬಿದ್ದರೆ ಪಕ್ಷಿಗಳನ್ನ ಕೊಲ್ಲುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ ಅಂತ ಕೇಂದ್ರ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಇಲಾಖೆಯ ರಾಜ್ಯ ಸಚಿವ ಸಂಜೀವ್ ಬಲ್ಯಾನ್ ಹೇಳಿದ್ದಾರೆ. ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಮಾತನಾಡಿ, ಹಕ್ಕಿಜ್ವರ ಮನುಷ್ಯರಿಗೂ ಹರಡುತ್ತೆ. ಹೀಗಾಗಿ ಎಲ್ಲರೂ ಅಲರ್ಟ್​ ಆಗಿರಬೇಕು, ಕೇರ್​ಫುಲ್​ ಆಗಿರಬೇಕು ಅಂತ ಹೇಳಿದ್ದಾರೆ.

ಕೇರಳದ ಕೊಟ್ಟಾಯಂ ಜಿಲ್ಲೆಯ ನೀಂದೂರು ಎಂಬಲ್ಲಿ ರೈತರೊಬ್ಬರು ಸಾಕಿರುವ ಬಾತುಕೋಳಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಸುಮಾರು 10,000 ಬಾತುಕೋಳಿಗಳನ್ನ ಕೊಲ್ಲಲು ಆದೇಶಿಸಲಾಗಿದೆ. ಜೊತೆಗೆ ಈ ಪ್ರದೇಶದ ಜನರಿಗೂ ಹಕ್ಕಿಜ್ವರದ ಲಕ್ಷಣಗಳು ಕಾಣಿಸಿದೆಯಾ ಅನ್ನೋದನ್ನ ಚೆಕ್ ಮಾಡಲು ಪರೀಕ್ಷೆ ನಡೆಸಲಾಗ್ತಿದೆ ಅಂತ ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಹಕ್ಕಿಜ್ವರದಿಂದ ಪೆಟ್ಟು ತಿಂದಿರುವ ಪೌಲ್ಟ್ರಿ ಫಾರ್ಮ್​​ಗಳಿಗೆ ಕೇರಳ ಸರ್ಕಾರ ಪರಿಹಾರ ಘೋಷಿಸಿದೆ. 2 ತಿಂಗಳಿನ ಕೋಳಿಗೆ 200 ರೂಪಾಯಿ, 1 ತಿಂಗಳಿನ ಕೋಳಿಗೆ 100 ರೂಪಾಯಿ ನೀಡಲಾಗುತ್ತೆ ಅಂತ ಕೇರಳ ಸರ್ಕಾರ ಹೇಳಿದೆ. ಇನ್ನು ಕೇರಳದ ಅಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆ ಹಾಗೂ ಹರಿಯಾಣದ ಪಂಚಕುಲ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ಮಲ್ಟಿ ಡಿಸಿಪ್ಲಿನರಿ ತಂಡಗಳನ್ನ ನಿಯೋಜಿಸಿದೆ.

ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆ ಮೈಸೂರು-ಕೇರಳ ಗಡಿಯ ಹೆಚ್​.ಡಿ. ಕೋಟೆ ತಾಲೂಕಿನ ಬೋಧಿ ಚೆಕ್‌ಪೋಸ್ಟ್‌ನಲ್ಲಿ ಕೋಳಿ ಮತ್ತು ಇತರ ಪಕ್ಷಿಗಳ ಸಾಗಾಟವನ್ನ ನಿರ್ಬಂಧಿಸಲಾಗಿದೆ ಅಂತ ಮೈಸೂರು ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಕರ್ನಾಟಕದಲ್ಲಿ ಇದುವರೆಗೆ ಹಕ್ಕಿಜ್ವರದ ಯಾವುದೇ ಪ್ರಕರಣ ವರದಿಯಾಗಿಲ್ಲ. ಆದ್ರೆ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಅಂತ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.

ರಾಜಸ್ಥಾನದ ಝಲಾವಾರ್​ನಲ್ಲಿ ಹಕ್ಕಿಜ್ವರ ಸ್ಫೋಟಗೊಂಡಿದೆಯಲಾ ಅಲ್ಲಿ ಸುಮಾರು 100 ಕಾಗೆಗಳು ಸತ್ತುಬಿದ್ದಿವೆ. ಇದನ್ನ ಹೊರತುಪಡಿಸಿ ನವಿಲು, ಪಾರಿವಾಳ, ಕೋಗಿಲೆಗಳು ಸತ್ತಿವೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply