ಮೋದಿ ಜೊತೆ ಮಾತಾಡಿದ್ದೀನಿ, ಚೀನಾ ವಿರುದ್ಧ ಸಿಟ್ಟಾಗಿದ್ದಾರೆ..

masthmagaa.com:

ಲಡಾಖ್​ನ ಪೂರ್ವ ಭಾಗದಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷ ಏರ್ಪಟ್ಟಿರುವ ಬೆನ್ನಲ್ಲೇ ಮಹತ್ವದ ಹೇಳಿಕೆ ನೀಡಿರೋ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ಚೀನಾ ವಿಚಾರ ಕುರಿತು ಪ್ರಧಾನಿ ಮೋದಿ ಉತ್ತಮ ಮನಸ್ಥಿತಿಯಲ್ಲಿ ಇಲ್ಲ ಅಂತ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರೋ ಟ್ರಂಪ್, ‘140 ಕೋಟಿ ಜನಸಂಖ್ಯೆ ಇರುವ ಮತ್ತು ಶಕ್ತಿಶಾಲಿ ಸೇನಾಬಲ ಇರುವ ಭಾರತ-ಚೀನಾ ನಡುವೆ  ಸಂಘರ್ಷ ನಡೆಯುತ್ತಿದೆ. ಇದರಿಂದ ಭಾರತ ಖುಷಿಯಾಗಿಲ್ಲ. ಬಹುಶಃ ಚೀನಾ ಕೂಡ ಖುಷಿಯಾಗಿಲ್ಲ.. ನಾನು ಪ್ರಧಾನಿ ಮೋದಿ ಜೊತೆ ಮಾತನಾಡಿದ್ದೀನಿ. ಚೀನಾ ಜೊತೆಗಿನ ಸಂಘರ್ಷ ಕುರಿತು ಪ್ರಧಾನಿ ಮೋದಿ ಒಳ್ಳೆಯ ಮನಸ್ಥಿತಿಯಲ್ಲಿ ಇಲ್ಲ’ ಅಂತ ಹೇಳಿದ್ದಾರೆ.

ಕೊರೋನಾ ವೈರಸ್​ ಬಗ್ಗೆ ಚೀನಾ ವಿರುದ್ಧ ಅಮೆರಿಕ ಮುನಿಸಿಕೊಂಡಿರುವ ನಡುವೆ, ಭಾರತ-ಚೀನಾ ನಡುವೆ ಸಂಘರ್ಷ ನಡೆಯುತ್ತಿರುವಾಗಲೇ ಡೊನಾಲ್ಡ್​ ಟ್ರಂಪ್ ಅವರ ಹೇಳಿಕೆ ಕುತೂಹಲ ಕೆರಳಿಸಿದೆ. ಟ್ರಂಪ್ ಏನೋ ಪ್ರಧಾನಿ ಮೋದಿ ಜೊತೆ ಮಾತನಾಡಿದ್ದೀನಿ. ಅವರು ಚೀನಾ ವಿರುದ್ದ ಸಿಟ್ಟಾಗಿದ್ದಾರೆ ಅಂತ ಹೇಳಿದ್ರೆ.. ಕೇಂದ್ರ ಸರ್ಕಾರದ ಉನ್ನತ ಮೂಲಗಳ ಪ್ರಕಾರ ಇತ್ತೀಚೆಗೆ ಪ್ರಧಾನಿ ಮೋದಿ ಮತ್ತು ಟ್ರಂಪ್ ಜೊತೆ ಯಾವುದೇ ದೂರವಾಣಿ ಸಂಭಾಷಣೆ ನಡೆದಿಲ್ಲ ಅಂತ ಹೇಳಲಾಗ್ತಿದೆ. ಉಭಯ ನಾಯಕರ ನಡುವೆ ಕೊನೆಯಬಾರಿ ಮಾತುಕತೆ ನಡೆದಿದ್ದು ಏಪ್ರಿಲ್ 4ರಂದು. ಅಂದು ಹೈಡ್ರಾಕ್ಸಿಕ್ಲೋರೋಕ್ವಿನ್​ ಮಾತ್ರೆಗಳ ರಫ್ತು ಕುರಿತು ಮಾತುಕತೆ ನಡೆದಿತ್ತು ಅಂತ ಮೂಲಗಳು ಹೇಳಿವೆ.

-masthmagaa.com

Contact Us for Advertisement

Leave a Reply