ಭಾರತದಲ್ಲಿ ಕೊರೋನಾ ಲಸಿಕೆ ಮೊದಲು ಯಾರಿಗೆ ಸಿಗುತ್ತೆ ಗೊತ್ತಾ..?

masthmagaa.com:

ದೆಹಲಿ: ದೇಶದಲ್ಲಿ ಲಸಿಕೆ ಆವಾಗ ಬರುತ್ತೆ.. ಇವಾಗ ಬರುತ್ತೆ ಅಂತ ಸುದ್ದಿಗಳು ಬರುತ್ತಿರುವ ಹೊತ್ತಲ್ಲೇ ಲಸಿಕೆ ಬಂದ್ರೆ ಮೊದಲು ಯಾರಿಗೆ ನೀಡಲಾಗುತ್ತೆ ಅನ್ನೋ ಚರ್ಚೆ ಶುರುವಾಗಿದೆ. ಅದಕ್ಕಾಗಿ ಸರ್ಕಾರ ಕೂಡ ಮೊದಲ ಹಂತದಲ್ಲಿ ಲಸಿಕೆಯನ್ನು ಯಾರಿಗೆಲ್ಲಾ ಕೊಡ್ಬೇಕು ಅನ್ನೋ ಬಗ್ಗೆ ಪ್ಲಾನ್ ಮಾಡುತ್ತಿದೆ. ಇದಕ್ಕಾಗಿ 30 ಕೋಟಿ ಫಲಾನುಭವಿಗಳನ್ನು ಲಿಸ್ಟ್​ ಮಾಡಲು ಶುರು ಮಾಡಿದೆ. ಅಂದ್ರೆ ಆರೋಗ್ಯ ಕಾರ್ಯಕರ್ತರು, ಪೊಲೀಸರು, ಪೌರ ಕಾರ್ಮಿಕರು, ಹಿರಿಯ ನಾಗರಿಕರು ಮತ್ತು ಈಗಾಗಲೇ ಬೇರೆ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮೊದಲ ಆದ್ಯತೆ ನೀಡಲಾಗಿದೆ. ಮೊದಲ 60 ಕೋಟಿ ಡೋಸ್​​ಗಳಷ್ಟು ಲಸಿಕೆಯನ್ನು ಈ ವರ್ಗದ 30 ಕೋಟಿ ಜನರಿಗೆ ನೀಡಲು ಸರ್ಕಾರ ನಿರ್ಧರಿಸಿದೆ ಅಂತ ತಿಳಿದು ಬಂದಿದೆ.

4 ವಿಧಗಳಲ್ಲಿ ವರ್ಗೀಕರಣ ಮಾಡಲಾಗಿದ್ದು, 50ರಿಂದ 70 ಲಕ್ಷದಷ್ಟು ಆರೋಗ್ಯ ಸಿಬ್ಬಂದಿ, 2 ಕೋಟಿಯಷ್ಟು ಕೊರೋನಾ ವಾರಿಯರ್ಸ್​ ಅಂದ್ರೆ ಯೋಧರು, ಪೊಲೀಸರು ಮತ್ತು ಪೌರಕಾರ್ಮಿಕರು, ಉಳಿದ 26 ಕೋಟಿಯಷ್ಟು 50 ವರ್ಷ ದಾಟಿದ ಮತ್ತು ಬೇರೆ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರನ್ನು ಲಿಸ್ಟ್​ ಮಾಡಲಾಗಿದೆ.

ದೇಶದಲ್ಲಿ ಈಗಾಗಲೇ 3 ಕೊರೋನಾ ಲಸಿಕೆಗಳು ಮಾನವ ಹಂತದ ಪ್ರಯೋಗದಲ್ಲಿವೆ. ಇವುಗಳ ಪೈಕಿ ಸೇರಂ ಇನ್​ಸ್ಟಿಟ್ಯೂಟ್​​ ಪ್ರಯೋಗ ನಡೆಸುತ್ತಿರುವ ಆಕ್ಸ್​ಫರ್ಡ್​​-ಅಸ್ಟ್ರಾಜೆನೆಕಾ ಲಸಿಕೆ ಈಗಾಗಲೇ 3ನೇ ಹಂತದ ಮಾನವ ಪ್ರಯೋಗಕ್ಕೆ ಕಾಲಿಟ್ಟಿದೆ.

-masthmagaa.com

 

Contact Us for Advertisement

Leave a Reply