ಇವು ಮೋದಿ ನಿರ್ಮಿತ ವಿಪತ್ತುಗಳು: ಪಟ್ಟಿ ಕೊಟ್ಟ ರಾಹುಲ್ ಗಾಂಧಿ

masthmagaa.com:

ದೆಹಲಿ: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಜಿಡಿಪಿಯಲ್ಲಿ ಐಸಿಹಾಸಿಕ ಕುಸಿತ ಮತ್ತು ಗಡಿಯಲ್ಲಿ ಚೀನೀ ಸೈನಿಕರ ಜೊತೆಗಿನ ಸಂಘರ್ಷದ ಕುರಿತು ಕೇಂದ್ರವನ್ನು ಟೀಕಿಸಿರುವ ರಾಹುಲ್ ಗಾಂಧಿ, ಮೋದಿ ನಿರ್ಮಿತ ವಿಪತ್ತುಗಳು ಅಂತ 6 ವಿಷಯಗಳನ್ನು ಪಟ್ಟಿ ಮಾಡಿದ್ದಾರೆ. ಜಿಡಿಪಿ ದರ ಕುಸಿತ -23.9%, 45 ವರ್ಷಗಳಲ್ಲೇ ಅತಿ ಹೆಚ್ಚಿನ ನಿರುದ್ಯೋಗ, 12 ಕೋಟಿ ಉದ್ಯೋಗ ನಷ್ಟ, ಕೇಂದ್ರ ರಾಜ್ಯ ಸರ್ಕಾರಗಳಿಗೆ ಜಿಎಸ್​​ಟಿ ಪಾವತಿಸುತ್ತಿಲ್ಲ, ಪ್ರಪಂಚದಲ್ಲೇ ಪ್ರತಿನಿತ್ಯ ಅತಿ ಹೆಚ್ಚು ಕೊರೋನಾ ಸೋಂಕಗಳು ಪತ್ತೆ ಮತ್ತು ಸಾವು, ಗಡಿಯಲ್ಲಿ ಬಾಹ್ಯ ಶಕ್ತಿಗಳ ಆಕ್ರಮಣಶೀಲತೆ… ಮೋದಿಯವರು ಮಾಡಿರುವ ಈ ವಿಪತ್ತುಗಳಿಂದ ದೇಶವೇ ತತ್ತರಿಸುತ್ತಿದೆ ಅಂತ ರಾಹುಲ್ ಗಾಂಧಿಯವರು ಟ್ವೀಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply