ಇವತ್ತು ರಜನಿ ಹುಟ್ಟುಹಬ್ಬ! ಅಂದು ಕಂಡಕ್ಟರ್ ಆಗಿದ್ದವರಿಗೆ ಇಂದು ಪ್ರಧಾನಿ ವಿಶ್​​..!

masthmagaa.com:

ಚೆನ್ನೈ: ಇವತ್ತು ಸೂಪರ್ ಸ್ಟಾರ್ ರಜನಿಕಾಂತ್ 70ನೇ ಹುಟ್ಟುಹಬ್ಬ.. ರಜನಿಯ ಫ್ಯಾನ್ಸ್​ ಜೊತೆಗೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ಹುಟ್ಟುಹಬ್ಬದ ಶುಭಕೋರುತ್ತಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ರಜನಿಕಾಂತ್​​ ಅವರಿಗೆ ಟ್ವೀಟ್ ಮೂಲಕ ಶುಭಕೋರಿದ್ದಾರೆ. ಪ್ರಿಯ ರಜನಿಕಾಂತ್​​​ ಜೀ.. ಹುಟ್ಟುಹಬ್ಬದ ಶುಭಾಶಯಗಳು. ನಿಮಗೆ ದೀರ್ಘಾಯು ಮತ್ತು ಆರೋಗ್ಯಯುತ ಜೀವನ ಸಿಗಲೆಂದು ಹಾರೈಸುತ್ತೇನೆ ಅಂತ ಟ್ವೀಟ್ ಮಾಡಿದ್ದಾರೆ.

ರಜನಿಕಾಂತ್ ಅವರು 1950ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದರು. ಇವರು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ರು. ಆರಂಭದಲ್ಲಿ ಇವರ ಜೀವನ ತುಂಬಾ ಕಷ್ಟದಿಂದ ಕೂಡಿತ್ತು. ಬಸ್​ ಕಂಡಕ್ಟರ್ ಆಗಿ ಕೆಲಸ ಮಾಡಿದ್ದ ರಜನಿಕಾಂತ್, ಟಿಕೆಟ್ ನೀಡುವ ಮತ್ತು ಶಿಳ್ಳೆ ಹೊಡೆಯೋ ಸ್ಟೈಲ್​​ನಿಂದ ಆಗಲೇ ಪ್ರಯಾಣಿಕರು ಮತ್ತು ಸಹೋದ್ಯೋಗಿಗಳ ನಡುವೆ ಫೇಮಸ್ ಆಗಿದ್ರು. ನಂತರ ನಾಟಕಗಳಲ್ಲಿ ಭಾರಿ ಕ್ರೇಜ್ ಹೊಂದಿದ್ದ ರಜನಿಕಾಂತ್​​​, ಕೆಲಸ ಬಿಟ್ಟು ಚೆನ್ನೈಗೆ ಹೋಗಿ ಫಿಲ್ಮ್​ ಇಂಡಸ್ಟ್ರಿ ಸೇರಿದ್ರು. ಇವರ ನಾಟಕ ಗಮನಿಸಿದ ನಿರ್ದೇಶಕ ಬಾಲಚಂದರ್​​​​, ತಮ್ಮ ಸಿನಿಮಾದಲ್ಲಿ ಅವಕಾಶ ಕೊಟ್ರು. ಅಷ್ಟೆ.. ಅವತ್ತಿಂದ ಇವತ್ತಿನವರೆಗೆ ರಜನಿಕಾಂತ್ ತಿರುಗಿ ನೋಡಲೇ ಇಲ್ಲ.. ದಕ್ಷಿಣ ಭಾರತದ ಅತಿದೊಡ್ಡ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ರು. ಈಗ ತಮಿಳುನಾಡಿನ ರಾಜಕೀಯ ರಂಗದಲ್ಲಿ ಹೆಜ್ಜೆ ಇಡಲು ಮುಂದಾಗಿದ್ದು, ಡಿಸೆಂಬರ್ 31ರಂದು ಪಕ್ಷದ ಕುರಿತು ಅಧಿಕೃತ ಘೋಷಣೆ ಮಾಡಲಿದ್ದಾರೆ.

-masthmagaa.com

Contact Us for Advertisement

Leave a Reply