masthmagaa.com:

ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಇಂದು 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ತಾಯಿ ರಾಬ್ರಿ ದೇವಿ, ಸಹೋದರ ತೇಜ್​ಪ್ರತಾಪ್ ಯಾದವ್ ಮತ್ತು ಕುಟುಂಬ ಸದಸ್ಯರ ಜೊತೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ರು. ಇಂದು ಬರ್ತ್​ಡೇ ಆಚರಿಸುತ್ತಿರುವ ತೇಜಸ್ವಿಗೆ ನಾಳೆ ಬರ್ತ್​ಡೇ ಗಿಫ್ಟ್ ಸಿಗುವ ಸಾಧ್ಯತೆ ಇದೆ. ಯಾಕಂದ್ರೆ ನಾಳೆ ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಮತದಾನೋತ್ತರ ಸಮೀಕ್ಷೆಗಳು ತೇಜಸ್ವಿ ಯಾದವ್ ನಾಯಕತ್ವದ ಮಹಾಘಟಬಂಧನ್ ಸರ್ಕಾರ ಅಧಿಕಾರಕ್ಕೇರುವ ಸಾಧ್ಯತೆ ಇದೆ ಅಂತ ಹೇಳಿವೆ. ಒಂದ್ವೇಳೆ ಸಮೀಕ್ಷೆಗಳು ಹೇಳಿದ್ದು ನಿಜವೇ ಆದರೆ ತೇಜಸ್ವಿ ಯಾದವ್​ಗೆ ಅದಕ್ಕಿಂತ ದೊಡ್ಡ ಗಿಫ್ಟ್ ಮತ್ತೊಂದಿಲ್ಲ. ಅವರೇ ಬಿಹಾರ ಸಿಎಂ ಆಗಲಿದ್ದಾರೆ. ಸೋ ತೇಜಸ್ವಿಗೆ ಬರ್ತ್​ಡೇ ಗಿಫ್ಟ್​ ಸಿಗುತ್ತಾ, ಇಲ್ವಾ ಅನ್ನೋದನ್ನ ನಾಳೆವರೆಗೆ ಕಾದು ನೋಡಬೇಕು.

-masthmagaa.com

Contact Us for Advertisement

Leave a Reply