masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 75,760 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು ಹೊಸ ದಾಖಲೆ ಬರೆದಿದೆ. ಭಾರತದಲ್ಲಿ ಇದುವರೆಗಿನ ಹೈಯೆಸ್ಟ್ ಮತ್ತು ಜಗತ್ತಿನಲ್ಲಿ ಎರಡನೇ ಹೈಯೆಸ್ಟ್ ನಂಬರ್ ಇದು. ಜುಲೈ 16ರಂದು ಅಮೆರಿಕದಲ್ಲಿ 77,000+ ಜನರಿಗೆ ಸೋಂಕು ತಗುಲಿತ್ತು. ಇದೀಗ ಭಾರತದಲ್ಲಿ 75,000+ ಪ್ರಕರಣಗಳು ದೃಢಪಟ್ಟಿರೋದು ಆತಂಕಕಾರಿ. ದೇಶದಲ್ಲಿ ಸದ್ಯ ಒಟ್ಟು ಸೋಂಕಿತರ ಸಂಖ್ಯೆ 33.10 ಲಕ್ಷ ದಾಟಿದೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,023 ಸೋಂಕಿತರು ಮೃತಪಟ್ಟಿದ್ದು ಒಟ್ಟು ಮೃತಪಟ್ಟವರ ಸಂಖ್ಯೆ 60,472 ಆಗಿದೆ. ಹೊಸದಾಗಿ 56,000+ ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 25.23 ಲಕ್ಷ ದಾಟಿದ್ದು, 7.25 ಲಕ್ಷ ಸೋಂಕಿತರು ಇನ್ನೂ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತದಲ್ಲಿ ಗುಣಮುಖ ಪ್ರಮಾಣ 76.24% ಇದ್ದು, ಸಾವಿನ ಪ್ರಮಾಣ 1.83% ಇದೆ. ಆಗಸ್ಟ್​ 26ರಂದು ದೇಶದಲ್ಲಿ 9.24 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ 3.85 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷೆ ಮಾಡಲಾಗಿದೆ ಅಂತ ಐಸಿಎಂಆರ್ ತಿಳಿಸಿದೆ.

ರಾಜ್ಯವಾರು ಸಕ್ರಿಯ ಪ್ರಕರಣ (ಟಾಪ್-10):

1. ಮಹಾರಾಷ್ಟ್ರ: 1.73 ಲಕ್ಷ ಪ್ರಕರಣ (23,000+ ಸಾವು)

2. ಆಂಧ್ರಪ್ರದೇಶ: 92,000+ ಪ್ರಕರಣ (3,500+ ಸಾವು)

3. ಕರ್ನಾಟಕ: 83,000+ ಪ್ರಕರಣ (5,000+ ಸಾವು)

4. ತಮಿಳುನಾಡು: 52,000+ ಪ್ರಕರಣ (6,800+ ಸಾವು)

5. ಉತ್ತರಪ್ರದೇಶ: 51,000+ ಪ್ರಕರಣ (3,100+ ಸಾವು)

6. ತೆಲಂಗಾಣ: 27,000+ ಪ್ರಕರಣ (788 ಸಾವು)

7. ಪಶ್ಚಿಮ ಬಂಗಾಳ: 26,000+ ಪ್ರಕರಣ (2,900+ ಸಾವು)

8. ಒಡಿಶಾ: 24,000+ ಪ್ರಕರಣ (441 ಸಾವು)

9. ಕೇರಳ: 22,000+ ಪ್ರಕರಣ (257 ಸಾವು)

10. ಬಿಹಾರ: 19,000+ ಪ್ರಕರಣ (530 ಸಾವು)

-masthmagaa.com

Contact Us for Advertisement

Leave a Reply