ಸುಶಾಂತ್ ಸಾವಿನ ಪ್ರಕರಣದಲ್ಲಿ ಗೆಳತಿ ರಿಹಾ ಚಕ್ರಬರ್ತಿ ಬಂಧನ ಸಾಧ್ಯತೆ..!

masthmagaa.com:

ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಪ್ರಕರಣದಲ್ಲಿ ಮಾದಕ ವಸ್ತು ಆಯಾಮದ ಬಗ್ಗೆ ತನಿಖೆ ನಡೆಸುತ್ತಿರುವ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯುರೊ (NCB) ನಟಿ ರಿಹಾ ಚಕ್ರಬರ್ತಿಗೆ ಸಮನ್ಸ್​ ನೀಡಿದೆ. ಈ ಹಿನ್ನೆಲೆ ಮುಂಬೈನ ಎನ್​ಸಿಬಿ ಕಚೇರಿಗೆ ಆಗಮಿಸಿದ ಸುಶಾಂತ್ ಅವರ ಮಾಜಿ ಗೆಳತಿ ವಿಚಾರಣೆಗೆ ಹಾಜರಾಗಿದ್ದಾರೆ.

ತನ್ನ ಸಹೋದರ ಶೌವಿಕ್ ಚಕ್ರಬರ್ತಿಯನ್ನು ಎನ್​ಸಿಬಿ ಅಧಿಕಾರಿಗಳು ಅರೆಸ್ಟ್ ಮಾಡಿದ 2 ದಿನದ ನಂತರ ರಿಹಾ ಚಕ್ರಬರ್ತಿಯನ್ನು ವಿಚಾರಣೆಗೆ ಕರೆದಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಅಲ್ಲದೆ ವಿಚಾರಣೆ ವೇಳೆ ಶೌವಿಕ್ ಚಕ್ರಬರ್ತಿ ಹಲವು ವಿಚಾರಗಳನ್ನು ಬಿಚ್ಟಿಟ್ಟಿರುವ ಸಾಧ್ಯತೆ ದಟ್ಟವಾಗಿದೆ.

ಮೂಲಗಳ ಪ್ರಕಾರ ಶೌವಿಕ್ ಮತ್ತು ರಿಹಾಳನ್ನು ಎನ್​ಸಿಬಿ ಅಧಿಕಾರಿಗಳು ಎದುರು ಬದುರು ಕೂರಿಸಿಕೊಂಡು ವಿಚಾರಣೆ ನಡೆಸಲಿದ್ದಾರೆ. ಒಂದ್ವೇಳೆ ಹೆಚ್ಚಿನ ವಿಚಾರಣೆ ಅಗತ್ಯಬಿದ್ದರೆ ರಿಹಾ ಚಕ್ರಬರ್ತಿಯನ್ನು ವಶಕ್ಕೆ ಪಡೆದು ಬಂಧಿಸುವ ಸಾಧ್ಯತೆ ಕೂಡ ಇದೆ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply