ಪಾಕಿಸ್ತಾನಕ್ಕೆ ದೊಡ್ಡ ಅವಮಾನ..! ಎಂಥಾ ದುರವಸ್ಥೆ ನೋಡಿ…

ಇತ್ತೀಚೆಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿಶ್ವಸಂಸ್ಥೆಗೆ ಹೋಗಿದ್ದು ನಿಮಗೆಲ್ಲಾ ಗೊತ್ತಿದೆ. ಆದ್ರೆ ವಾಪಸ್ ಬರೋವಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ವಾಪಸ್ ಹೋಗಿದ್ದು ಕೂಡ ಹೊಸ ವಿಚಾರವಲ್ಲ. ಆದ್ರೆ ಅದ್ರ ಹಿಂದಿನ ಅಸಲಿ ಕಾರಣ ಈಗ ಬಯಲಾಗಿದೆ. ಇಮ್ರಾನ್ ಖಾನ್ ಇದ್ದ ವಿಮಾನದಲ್ಲಿ ಯಾವುದೇ ದೋಷ ಕಾಣಿಸಿಕೊಂಡಿರಲಿಲ್ಲ. ಬದಲಿಗೆ ಅದನ್ನು ಸೌದಿ ರಾಜಕುಮಾರ ಮೊಹ್ಮದ್ ಬಿನ್ ಸಲ್ಮಾನ್ ವಾಪಸ್ ಕರೆಸಿಕೊಂಡಿದ್ದರು ಅನ್ನೋದು ಬಯಲಾಗಿದೆ.

ಇಮ್ರಾನ್ ಖಾನ್ ವಿಶ್ವಸಂಸ್ಥೆಗೆ ಹೋಗುವ ಮೊದಲು ಸೌದಿಗೆ ತೆರಳಿದ್ದರು. ತಮ್ಮ ವಿಮಾನ ಕೊಂಡೊಯ್ಯದ ಕಾರಣ ಖಾಸಗಿ ವಿಮಾನದಲ್ಲಿ ವಿಶ್ವಸಂಸ್ಥೆಗೆ ಹೊರಟಿದ್ದರು. ಆದ್ರೆ ಮೊಹ್ಮದ್ ಬಿನ್ ಸಲ್ಮಾನ್ ತಮ್ಮ ವಿಮಾವವನ್ನೇ ಕೊಟ್ಟು ಕಳುಹಿಸಿದ್ದರು.

ಆದ್ರೆ ವಿಶ್ವಸಂಸ್ಥೆಯಲ್ಲಿ ಇಮ್ರಾನ್ ಖಾನ್ ಮಾಡಿದ ಭಾಷಣವನ್ನು ಕೇಳಿದ ಮೊಹ್ಮದ್ ಬಿನ್ ಸಲ್ಮಾನ್ ತುಂಬಾ ಬೇಸರಗೊಂಡಿದ್ದರು. ಹೀಗಾಗಿಯೇ ಇಮ್ರಾನ್ ಖಾನ್ ಅಮೆರಿಕಾದಿಂದ ಪಾಕಿಸ್ತಾನಕ್ಕೆ ವಾಪಸ್ ಬರುವಾಗ ಮಾರ್ಗ ಮಧ್ಯದಲ್ಲೇ ವಿಮಾನ ವಾಪಸ್ ತರುವಂತೆ ಆದೇಶ ನೀಡಿದ್ದರು. ಹೀಗಾಗಿಯೇ ಇಮ್ರಾನ್ ಖಾನ್ ಇದ್ದ ವಿಮಾನ ವಾಪಸ್ ಅಮೆರಿಕಾಗೆ ತೆರಳಿತ್ತು. ಅಲ್ಲದೆ ಇಮ್ರಾನ್ ಮತ್ತೊಂದು ಖಾಸಗಿ ವಿಮಾನದಲ್ಲಿ ಪಾಕ್‍ಗೆ ಆಗಮಿಸಿದ್ದರು.

Contact Us for Advertisement

Leave a Reply