ಆಂಧ್ರಪ್ರದೇಶದಲ್ಲಿ ನವೆಂಬರ್ 2ರಿಂದಲೇ ಶಾಲಾ-ಕಾಲೇಜು ಓಪನ್

masthmagaa.com:

ಕೊರೋನಾ ಹಾವಳಿಯಿಂದ ಬಂದ್​ ಆಗಿರುವ ಶಾಲೆಗಳು ರಾಜ್ಯದಲ್ಲಿ ಯಾವಾಗ ಆರಂಭವಾಗುತ್ತೆ ಅನ್ನೋ ಪ್ರಶ್ನೆ ಎಲ್ಲರಿಗೂ ಇದೆ. ಇದೀಗ ಶಾಲಾ-ಕಾಲೇಜುಗಳನ್ನ ಓಪನ್ ಮಾಡಲು ಆಂಧ್ರಪ್ರದೇಶದ ಜಗನ್ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ನವೆಂಬರ್ 2ರಿಂದಲೇ ಆಂಧ್ರದಲ್ಲಿ ಶಾಲಾ-ಕಾಲೇಜು ಆರಂಭಿಸಲು ನಿರ್ಧರಿಸಲಾಗಿದೆ. ಇದರ ಪ್ರಕಾರ 9ರಿಂದ 12ನೇ ತರಗತಿವರೆಗಿನ ಶಾಲಾ-ಕಾಲೇಜುಗಳು ನವೆಂಬರ್ 2ರಿಂದ ಆರಂಭವಾಗಲಿದೆ. ಆದ್ರೆ ತರಗತಿಗಳು ಅರ್ಧ ದಿನ ಮಾತ್ರ ನಡೆಯಲಿದ್ದು, ಒಂದು ದಿನ ಬಿಟ್ಟು ಒಂದು ದಿನ ಎಂಬಂತೆ ತರಗತಿಗಳು ನಡೆಯಲಿವೆ. ಅಂದ್ರೆ ಇವತ್ತು ಶಾಲಾ-ಕಾಲೇಜು ಓಪನಾದ್ರೆ ನಾಳೆ ಓಪನ್ ಇರೋದಿಲ್ಲ. ಮತ್ತೆ ನಾಡಿದ್ದು ಓಪನ್ ಆಗಲಿದೆ. ಹೀಗೆ 9ರಿಂದ 12ನೇ ತರಗತಿ ನಡೆಯಲಿದೆ.

ಅದೇ ರೀತಿ 6ರಿಂದ 8ನೇ ತರಗತಿವರೆಗಿನ ಶಾಲೆಗಳು ನವೆಂಬರ್ 23ರಿಂದ ಆರಂಭವಾಗಲಿದೆ. ಇಲ್ಲೂ ಕೂಡ ಅರ್ಧ ದಿನ ಮಾತ್ರ ಶಾಲೆಗಳು ನಡೆಯಲಿದ್ದು, ಒಂದು ದಿನ ಬಿಟ್ಟು ಒಂದು ದಿನ ಎಂಬಂತೆ ತರಗತಿಗಳು ನಡೆಯಲಿವೆ ಅಂತ ಆಂಧ್ರಪ್ರದೇಶ ಸಿಎಂ ಕಚೇರಿ ತಿಳಿಸಿದೆ. ಕರ್ನಾಟಕದಲ್ಲಿ ನವೆಂಬರ್ 17ರಿಂದ ಡಿಗ್ರಿ, ಪಿಜಿ, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕಾಲೇಜುಗಳು ಆರಂಭವಾಗಲಿದೆ ಅಂತ ಸರ್ಕಾರ ಹೇಳಿದೆ. ಆದ್ರೆ ಅರ್ಧ ದಿನ ಅಥವಾ ಒಂದು ದಿನ ಬಿಟ್ಟು ಒಂದು ಎಂಬ ನಿಯಮಗಳನ್ನ ರಾಜ್ಯದಲ್ಲಿ ಜಾರಿಗೆ ತಂದಿಲ್ಲ.

-masthmagaa.com

Contact Us for Advertisement

Leave a Reply