masthmagaa.com:

ಆಕ್ಸ್​ಫರ್ಡ್​ ಯುನಿವರ್ಸಿಟಿ ಮತ್ತು ಆಸ್ಟ್ರಾಝೆನೆಕಾ ಕಂಪನಿ ಅಭಿವೃದ್ಧಿಪಡಿಸಿರುವ ‘ಕೋವಿಶೀಲ್ಡ್’ ಲಸಿಕೆ ಸುರಕ್ಷಿತ ಮತ್ತು ಕೊರೋನಾ ವಿರುದ್ಧ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತೆ ಅಂತ ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಹೇಳಿದೆ. ಜೊತೆಗೆ ಚೆನ್ನೈ ಮೂಲದ ಸ್ವಯಂ ಸೇವಕ ಮಾಡಿದ ಆರೋಪದಿಂದ ಲಸಿಕೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಎಲ್ಲಾ ನಿಯಮ ಮತ್ತು ಗೈಡ್​ಲೈನ್ಸ್ ಫಾಲೋ ಮಾಡಿದ್ದೇವೆ. ಸ್ವಯಂಸೇವಕನ ಆರೋಗ್ಯದಲ್ಲಾದ ಏರುಪೇರಿಗೂ ಲಸಿಕೆಗೂ ಸಂಬಂಧವಿಲ್ಲ ಅಂತ ನಿಖಾ ತಂಡವೇ ತಿಳಿಸಿದೆ. ಕಂಪನಿಯ ಹೆಸರು ಹಾಳು ಮಾಡುತ್ತಿರುವ ಸ್ವಯಂ ಸೇವಕನಿಗೆ ಲೀಗಲ್ ನೋಟಿಸ್ ಕಳಿಸಲಾಗಿದೆ ಅಂತ ಸೀರಂ ಹೇಳಿದೆ.

ಇತ್ತೀಚೆಗೆ ಚೆನ್ನೈ ಮೂಲದ ಸ್ವಯಂ ಸೇವಕನೊಬ್ಬ ‘ಕೋವಿಶೀಲ್ಡ್​’ ಲಸಿಕೆಯಿಂದ ತನ್ನ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳಾಗಿವೆ ಅಂತ ಗಂಭೀರ ಆರೋಪ ಮಾಡಿದ್ದ. ಈ ಸಂಬಂಧ 5 ಕೋಟಿ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದ. ಇದು ಸುಳ್ಳು ಅಂತ ಆತನ ವಿರುದ್ಧ 100 ಕೋಟಿ ರೂಪಾಯಿಗೂ ಹೆಚ್ಚಿನ ಮಾನನಷ್ಟ ಮೊಕದ್ದಮೆ ಹೂಡೋದಾಗಿ ಸಿರಂ ಹೇಳಿತ್ತು. ಇದೀಗ ಮತ್ತೊಮ್ಮೆ ತನ್ನ​ ಲಸಿಕೆ ಸುರಕ್ಷಿತ ಅಂತ ಹೇಳುವ ಮೂಲಕ ಜನರ ಭಯವನ್ನ ಹೋಗಲಾಡಿಸುವ ಪ್ರಯತ್ನ ಮಾಡಿದೆ.

-masthmagaa.com

Contact Us for Advertisement

Leave a Reply