ಕೊರೋನಾ ನಡುವೆಯೂ ಗೂಳಿ ಜಿಗಿತ​..! 2,337 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್​​

masthmagaa.com:

ದೆಹಲಿ: ಕೊರೋನಾ ವೈರಸ್​ ಹೊಡೆತಕ್ಕೆ ಒಳಗಾಗಿದ್ದ ಸೆನ್ಸೆಕ್ಸ್​ನಲ್ಲಿ ಇವತ್ತು ಭಾರಿ ಪ್ರಮಾಣದ ಚೇತರಿಕೆ ಕಂಡು ಬಂದಿದೆ. ಮಧ್ಯಾಹ್ನ 2.50ರ ವೇಳೆಗೆ 2,337 ಅಂಕಗಳ ಏರಿಕೆಯೊಂದಿಗೆ 29,928ಕ್ಕೆ ತಲುಪಿದೆ. ಅಂದ್ರೆ ಒಟ್ಟಾರೆಯಾಗಿ ಶೇ. 8.47ರಷ್ಟು ಪ್ರಮಾಣದ ಏರಿಕೆ ಕಂಡಿದೆ. ಇನ್ನು ನಿಫ್ಟಿ ಕೂಡ 672 ಅಂಕಗಳ ಏರಿಕೆಯೊಂದಿಗೆ 9,756ಕ್ಕೆ ತಲುಪಿದೆ. ಅಂದ್ರೆ ಶೇ.8.32ರಷ್ಟು ಏರಿಕೆ ಕಂಡಿದೆ.

ಷೇರು ಮಾರುಕಟ್ಟೆ ಚೇತರಿಕೆಗೆ ಕಾರಣಗಳೇನು..? 

ಅಮೆರಿಕ ಮತ್ತು ಯೂರೋಪ್​​ನಲ್ಲಿ ನಿಧಾನವಾಗಿ ಕಾಯಿಲೆ ಸುಧಾರಿಸುವ ಲಕ್ಷಣ ಕಂಡು ಬಂದಿದೆ. ಇದ್ರಿಂದ ಅಮೆರಿಕದ ಷೇರು ಮಾರುಕಟ್ಟೆ ಸುಧಾರಿಸಿಕೊಂಡಿದೆ. ಜೊತೆಗೆ ಭಾರತದಲ್ಲಿ 20ಕ್ಕೂ ಹೆಚ್ಚು ಔಷಧ ಸಾಮಾಗ್ರಿ ರಫ್ತಿನ ಮೇಲಿದ್ದ ನಿರ್ಬಂಧವನ್ನು ತೆಗೆಯಲಾಗಿದೆ. ಹೀಗಾಗಿ ಔಷಧೋತ್ಪನ್ನ ಸಂಸ್ಥೆಗಳ ಷೇರುಗಳಲ್ಲಿ ಚೇತರಿಕೆ ಕಂಡು ಬಂದಿದೆ. ಇನ್ನು ಷೇರುಗಳ ಮೌಲ್ಯ ಬಿದ್ದಿರೋದ್ರಿಂದ ಹೂಡಿಕೆ ಮಾಡಲು ಇದು ಸರಿಯಾದ ಸಮಯ ಎಂದು ಹೂಡಿಕೆದಾರರು ಭಾವಿಸ್ತಿದ್ದು, ಹೆಚ್ಚಾಗಿ ಹೂಡಿಕೆ ಮಾಡ್ತಿದ್ದಾರೆ.

-masthmagaa.com

Contact Us for Advertisement

Leave a Reply