masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,661 ಜನರಿಗೆ ಹೊಸದಾಗಿ ಸೋಂಕು ತಗುಲಿದ್ದು, 705 ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 13,85,522ಕ್ಕೆ ಏರಿಕೆಯಾಗಿದ್ದು, ಮೃತಪಟ್ಟವರ ಸಂಖ್ಯೆ 32,063ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸತತ ಮೂರು ದಿನಗಳಿಂದ ಪ್ರತಿದಿನ 48 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ.

ಕಳೆದ 24 ಗಂಟೆಗಳಲ್ಲಿ 36,146 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು 8,85,577 ಸೋಂಕಿತರು ಗುಣಮುಖರಾದಂತಾಗಿದ್ದು 4,67,882ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜುಲೈ 25ರಂದು ದೇಶದಲ್ಲಿ ದಾಖಲೆಯ 4.42 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ ಒಟ್ಟು 1.62 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷೆ ಮಾಡಲಾಗಿದೆ ಅಂತ ಐಸಿಎಂಆರ್ ಹೇಳಿದೆ.

ಕೊರೋನಾ ಪೀಡಿತ ಟಾಪ್​-10 ರಾಜ್ಯಗಳು:

1. ಮಹಾರಾಷ್ಟ್ರ: 3.66 ಲಕ್ಷ ಪ್ರಕರಣ (13,389 ಸಾವು)

2. ತಮಿಳುನಾಡು: 2.06 ಲಕ್ಷ ಪ್ರಕರಣ (3,409 ಸಾವು)

3. ದೆಹಲಿ: 1.29 ಲಕ್ಷ ಪ್ರಕರಣ (3,806 ಸಾವು)

4. ಕರ್ನಾಟಕ: 90,000+ ಪ್ರಕರಣ (1,796 ಸಾವು)

5. ಆಂಧ್ರಪ್ರದೇಶ: 88,000+ ಪ್ರಕರಣ (933 ಸಾವು)

6. ಉತ್ತರಪ್ರದೇಶ: 63,000+ ಪ್ರಕರಣ (1,387 ಸಾವು)

7. ಪಶ್ಚಿಮ ಬಂಗಾಳ: 56,000+ ಪ್ರಕರಣ (1,332 ಸಾವು)

8. ಗುಜರಾತ್: 54,000+ ಪ್ರಕರಣ (2,300 ಸಾವು)

9. ತೆಲಂಗಾಣ: 52,000+ ಪ್ರಕರಣ (455 ಸಾವು)

10. ಬಿಹಾರ: 36,000+ ಪ್ರಕರಣ (234 ಸಾವು)

-masthmagaa.com

Contact Us for Advertisement

Leave a Reply