ದೇಶದಲ್ಲಿ 75 ಸಾವಿರ ಸಮೀಪಿಸಿದ ಸೋಂಕಿತರ ಸಂಖ್ಯೆ..!

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,525 ಮಂದಿಗೆ ಹೊಸದಾಗಿ ಸೋಂಕು ತಗುಲಿದ್ದು, 122‬ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 74,281ಕ್ಕೆ ಏರಿಕೆಯಾಗಿದೆ.

ಇದುವರೆಗೆ 2,415 ಮಂದಿ ಕೊರೋನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. 24,386 ಮಂದಿ ಗುಣಮುಖರಾಗಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ 47,480 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 24 ಸಾವಿರ ದಾಟಿದೆ. ನಂತರದ ಸ್ಥಾನದಲ್ಲಿ ಗುಜರಾತ್, ತಮಿಳುನಾಡು, ದೆಹಲಿ ಮತ್ತು ರಾಜಸ್ಥಾನ ಇದೆ. ರಾಜ್ಯವಾರು ಪಟ್ಟಿಯಲ್ಲಿ ಕರ್ನಾಟಕ 13ನೇ ಸ್ಥಾನದಲ್ಲಿದೆ.

ಟಾಪ್-5 ಕೊರೋನಾ ಪೀಡಿತ ರಾಜ್ಯಗಳು:

1. ಮಹಾರಾಷ್ಟ್ರ: 24,427 (921 ಸಾವು)

2. ಗುಜರಾತ್: 8,903 (537 ಸಾವು)

3. ತಮಿಳುನಾಡು: 8,718 (61 ಸಾವು)

4. ದೆಹಲಿ: 7,639 (86 ಸಾವು)

5. ರಾಜಸ್ಥಾನ: 4,126 (117 ಸಾವು)

-masthmagaa.com

Contact Us for Advertisement

Leave a Reply