‘ಮಾದಕ ಸುಳಿ’ಯಲ್ಲಿ ರಿಯಾ ಚಕ್ರಬರ್ತಿ..! ಹೆಚ್ಚಿದ ಸಂಕಷ್ಟ

masthmagaa.com:

ಮುಂಬೈ: ಸುಶಾಂತ್ ಸಿಂಗ್ ಪ್ರಕರಣದಲ್ಲಿ ಸಿಬಿಐ ತನಿಖೆ ತೀವ್ರಗೊಂಡಿದ್ದು, ಒಂದೊಂದೇ ರಹಸ್ಯಗಳು ಹೊರಬೀಳಲಾರಂಭಿಸಿವೆ. ಈವರೆಗೆ ಮಾದಕ ವಸ್ತುವಿಗೂ ನನಗೂ ಸಂಬಂಧವೇ ಇಲ್ಲ ಎಂದಿದ್ದ ರಿಯಾ ಚಕ್ರಬರ್ತಿ, ಡ್ರಗ್ಸ್ ಪಡೆದಿದ್ದು ಮಾತ್ರವಲ್ಲದೇ ಡ್ರಗ್ಸ್ ಮಾರಾಟ ಕೂಡ ಮಾಡುತ್ತಿದ್ದರು ಅನ್ನೋದು ಗೊತ್ತಾಗಿದೆ. ಸಿಬಿಐ ತನಿಖೆ ವೇಳೆ ವಾಟ್ಸಾಪ್​ ಚಾಟ್ ಮೂಲಕ ಈ ಸತ್ಯಾಂಶಗಳು ಹೊರಬೀಳುತ್ತಿವೆ. ಆರಂಭದಿಂದಲೂ ಸುಶಾಂತ್ ಸಾವಿನ ಪ್ರಕರಣದಲ್ಲಿ ಆರೋಪಿಯಾಗಿರುವ ರಿಯಾಗೆ ಇದ್ರಿಂದ ಸಂಕಷ್ಟ ಮತ್ತಷ್ಟು ಹೆಚ್ಚಬಹುದು. ಈಗಾಗಲೇ ರಿಯಾ ಸಹೋದರ ಶೋವಿಕ್ ಚಕ್ರಬರ್ತಿಯವರನ್ನು ಪೊಲೀಸರು ಬಂಧಿಸಿದ್ದು, ರಿಯಾಗೂ ನಾಳೆ ಎನ್​ಸಿಬಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಈ ನಡುವೆ ಸಿಬಿಐ ಅಧಿಕಾರಿಗಳು ಏಮ್ಸ್ ವೈದ್ಯರ ಜೊತೆಗೆ ಸುಶಾಂತ್ ಸಿಂಗ್ ರಜಪೂತ್​​ರ ಬಾಂದ್ರಾದ ನಿವಾಸಕ್ಕೆ ತೆರಳಿದ್ಧಾರೆ. ಈ ಹಿಂದೆ ಫಾರೆನ್ಸಿಕ್ ಅಧಿಕಾರಿಗಳ ಜೊತೆ ಸೇರಿ ಕ್ರೈಂ ಸೀನ್ ರೀ ಕ್ರಿಯೇಟ್ ಮಾಡಿದ್ದ ಅಧಿಕಾರಿಗಳು, ಇಂದು ಪುನಃ ಬೇರೆ ರೀತಿಯಲ್ಲಿ ಕ್ರೈಂ ಸೀನ್ ರೀಕ್ರಿಯೇಟ್ ಮಾಡಲಿದ್ಧಾರೆ. ಈ ವೇಳೆ ಸುಶಾಂತ್ ಸಹೋದರಿ ಮೀತೂ ಸಿಂಹ, ಸಿದ್ಧಾರ್ಥ್ ಪಿಠಾನಿ, ನೀರಜ್ ಕೂಡ ಮನೆಯಲ್ಲಿ ಉಪಸ್ಥಿತರಿದ್ದರು.

-masthmagaa.com

Contact Us for Advertisement

Leave a Reply