‘ಮಾಧ್ಯಮ ವಿಚಾರಣೆ’ಯಿಂದ ನ್ಯಾಯಾಂಗಕ್ಕೆ ಅಡ್ಡಿ: ಬಾಂಬೆ ಹೈಕೋರ್ಟ್​​​​​​

masthmagaa.com:

ಮಹಾರಾಷ್ಟ್ರ: ಮಾಧ್ಯಮ ವಿಚಾರಣೆ ಅಂದ್ರೆ ಡಿಬೇಟ್​​ಗಳಲ್ಲಿ ಕೂತ್ಕೊಂಡು ಹಂಗೆ ಹಿಂಗೆ ಅಂತ ಅಂದಾಜಿನ ಮೇಲೆ ಗುಂಡು ಹೊಡೀತಾರಲ್ವಾ.. ಅದ್ರಿಂದ ನ್ಯಾಯಾಂಗದ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತೆ. ಹಸ್ತಕ್ಷೇಪ ಮಾಡಿದಂತಾಗುತ್ತೆ ಅಂತ ಬಾಂಬೆ ಹೈಕೋರ್ಟ್​​ ಹೇಳಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಗಳ ಬಗ್ಗೆ ಬಾಂಬೆ ಹೈಕೋರ್ಟ್​​ಗೆ ಅರ್ಜಿ ಸಲ್ಲಿಕೆಯಾಗಿತ್ತು.

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ, ಮಾಧ್ಯಮಗಳು ಆತ್ಮಹತ್ಯೆಯಂತಹ ಪ್ರಕರಣಗಳನ್ನು ವರದಿ ಮಾಡುವಾಗ ತಾಳ್ಮೆಯಿಂದ ವರ್ತಿಸಬೇಕು. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಸಂಬಂಧ ಕೆಲ ಮಾಧ್ಯಮಗಳು ಮಾಡಿರೋ ವರದಿ ಅಪಮಾನಕರವಾಗಿವೆ ಅಂತ ಕೋರ್ಟ್​ ಹೇಳಿದೆ. ವಿಚಾರಣಾ ಹಂತದಲ್ಲಿರೋ ಪ್ರಕರಣಗಳ ಕುರಿತ ಇಂತಹ ವರದಿ ನ್ಯಾಯಾಂಗದ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುತ್ತೆ. ಅಡ್ಡಿಪಡಿಸುತ್ತೆ ಎಂದಿದೆ.

-masthmagaa.com

Contact Us for Advertisement

Leave a Reply