masthmagaa.com:

ಕೊರೋನಾ ಹಾವಳಿಯಿಂದ ಬಂದ್ ಆಗಿರುವ ಶಾಲೆಗಳು ರಾಜ್ಯದಲ್ಲಿ ಯಾವಾಗ ಆರಂಭವಾಗುತ್ತೆ ಅಂತ ಸರ್ಕಾರ ಇನ್ನೂ ಹೇಳಿಲ್ಲ. ಆದ್ರೆ ನವೆಂಬರ್ 16ರಿಂದ ಶಾಲೆಗಳನ್ನ ತೆರೆಯಲು ನಿರ್ಧರಿಸಿದ್ದ ನಮ್ಮ ಪಕ್ಕದ ರಾಜ್ಯ ತಮಿಳುನಾಡು ಇದೀಗ ಆ ನಿರ್ಧಾರವನ್ನ ವಾಪಸ್ ಪಡೆದಿದೆ. ಅಂದ್ಹಾಗೆ 16ನೇ ತಾರೀಖಿನಿಂದ 9ರಿಂದ 12ನೇ ತರಗತಿವರೆಗಿನ ಶಾಲಾ-ಕಾಲೇಜು ಮತ್ತು ಹಾಸ್ಟೆಲ್​ಗಳನ್ನ ತೆರೆಯೋದಾಗಿ ತಮಿಳುನಾಡು ಸರ್ಕಾರ ಇತ್ತೀಚೆಗೆ ಘೋಷಿಸಿತ್ತು. ಈ ಸಂಬಂಧ ಪೋಷಕರು ಮತ್ತು ಶಿಕ್ಷಕರ ಅಭಿಪ್ರಾಯ ಸಂಗ್ರಹಿಸುವಂತೆ ಎಲ್ಲಾ ಶಾಲಾ-ಕಾಲೇಜುಗಳಿಗೆ ಸೂಚಿಸಲಾಗಿತ್ತು. ಇದೀಗ ಪೋಷಕರಿಂದ ವಿರೋಧ ಕೇಳಿಬಂದ ಹಿನ್ನೆಲೆ ಶಾಲೆಗಳನ್ನ ತೆರೆಯುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿದೆ. ತಮಿಳುನಾಡಿನಲ್ಲಿ ಇದುವರೆಗೆ ಒಟ್ಟು 7 ಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ವರದಿಯಾಗಿವೆ.

ತಮಿಳುನಾಡು ಸರ್ಕಾರ ಯು-ಟರ್ನ್ ತೆಗೆದುಕೊಂಡ ಬೆನ್ನಲ್ಲೇ ಮಾತನಾಡಿರುವ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್​. ಸುರೇಶ್ ಕುಮಾರ್, ‘ಶಾಲೆಗಳನ್ನ ಮತ್ತೆ ಓಪನ್ ಮಾಡುವ ಬಗ್ಗೆ ನಾವು ನಿರ್ಧಾರ ತೆಗೆದುಕೊಂಡಿಲ್ಲ. ಶಾಲೆಗಳನ್ನ ತೆರೆಯುವ ಮುನ್ನ ಎಲ್ಲಾ ವಿಚಾರಗಳನ್ನ ಚರ್ಚಿಸಲಾಗುತ್ತದೆ ಮತ್ತು ತಜ್ಞರು, ಆರೋಗ್ಯ ಅಧಿಕಾರಿಗಳಿಂದ ಸಲಹೆಗಳನ್ನ ಪಡೆಯಲಾಗುತ್ತದೆ’ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply