ಮಗನಿಗಾಗಿ 1400 ಕಿಮೀ. ಸ್ಕೂಟರ್​​ ಓಡಿಸಿದ ಅಮ್ಮ..! – ಲಾಕ್ ಡೌನ್ ಎಫೆಕ್ಟ್

masthmagaa.com:

ಕೊರೋನಾ ಲಾಕ್​​​​ಡೌನ್ ಇಡೀ ದೇಶದ ಜನರನ್ನ ಮನೆಯಲ್ಲೇ ಬಂಧಿಯಾಗುವಂತೆ ಮಾಡಿದೆ. ಪರಿಣಾಮ ಬೇರೆ ಬೇರೆ ಊರುಗಳಿಗೆ ತೆರಳಿದ್ದ ಎಷ್ಟೋ ಮಂದಿ ಸಂಬಂಧಿಕರ ಮನೆಗಳಲ್ಲಿ ಲಾಕ್ ಆಗಿದ್ದಾರೆ. ಕೆಲವರು ನೆಡೆದುಕೊಂಡೇ ಊರು ಸೇರುದ್ದಾರೆ. ಆದ್ರೆ ಸಾವಿರಾರು ಕಿ.ಮೀ ದೂರದಲ್ಲಿರುವ ಜನ ತಮ್ಮ ತಮ್ಮ ಮನೆ ಸೇರಲಾಗದೆ ಪರಿತಪಿಸುತ್ತಿದ್ದಾರೆ. ಇದ್ರಿಂದ ಕೆಲ ಮನಕಲಕುವ ಘಟನೆಗಳು ಸಂಭವಿಸ್ತಿದೆ. ತೆಲಂಗಾಣದ ತಾಯಿಯೊಬ್ಬರು ತನ್ನ ಮಗನನ್ನು ಕರೆತರಲು ಸ್ಕೂಟಿಯಲ್ಲಿ 1,400 ಕಿ.ಮೀ. ಕ್ರಮಿಸಿದ್ದಾರೆ.

ಹೈದ್ರಾಬಾದ್​ನಿಂದ 200 ಕಿ.ಮೀ. ದೂರದ ನಿಜಾಮಾಬಾದ್​ನ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿರುವ 50 ವರ್ಷದ ರಜಿಯಾ ಬೇಗಮ್​​ಗೆ ಇಬ್ಬರು ಮಕ್ಕಳು.. 17 ವರ್ಷದ ಮಗ ಕಳೆದ ಮಾರ್ಚ್​​ 12ರಂದು ಕಾರಣಾಂತರಗಳಿಂದ ನೆಲ್ಲೂರಿನ ರೆಹಮತ್​ಬಾದ್​ಗೆ ತೆರಳಿದ್ದ. ಆದ್ರೆ ಲಾಕ್​ಡೌನ್ ಆದ ಕಾರಣ ಈತನಿಗೆ ಮನೆಗೆ ವಾಪಸ್ಸಾಗಲು ಸಾಧ್ಯವಾಗಲಿಲ್ಲ. ಈತನನ್ನು ಮನೆಗೆ ಕರೆದುಕೊಂಡು ಬರಲು ನಿರ್ಧರಿಸಿದ ತಾಯಿ ಸೋಮವಾರ ಬೆಳಗ್ಗೆ ಸ್ಥಳೀಯ ಪೊಲೀಸರ ಬಳಿ ಪಾಸ್ ಪಡೆದು ಸ್ಕೂಟರ್​ ಹತ್ತಿದ್ದಾರೆ. ರಸ್ತೆ ಖಾಲಿ ಇದ್ದಿದ್ರಿಂದ ಕೇವಲ ಮೂರೇ ದಿನದಲ್ಲಿ ಅಂದ್ರೆ ಬುಧವಾರ ಸಂಜೆ ಮಗನ ಜೊತೆ ಮನೆ ಸೇರಿದ್ದಾರೆ. ಮಧ್ಯೆ ಮಧ್ಯೆ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ತಡೆ ಹಿಡಿದಿದ್ದು,  ಪಾಸ್ ಇದ್ದಿದ್ರಿಂದ ಬಿಟ್ಟು ಕಳುಹಿಸಿದ್ದಾರೆ.

-masthmagaa.com

Contact Us for Advertisement

Leave a Reply