masthmagaa.com:

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಜಾಗ ಖಾಲಿ ಮಾಡೋಕಿಂತ ಮುಂಚೆ ತಮ್ಮ ಸ್ನೇಹಿತರನ್ನೆಲ್ಲಾ ಸೆಟಲ್ ಮಾಡಿ ಹೋಗೋಕೆ ಪ್ಲಾನ್ ಮಾಡ್ತಿದ್ದಂತೆ ಕಾಣ್ತಿದೆ. ಯಾಕಂದ್ರೆ ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್​​ಗೆ ಅಮೆರಿಕದಲ್ಲಿ ಯಾವುದೇ ರೀತಿಯ ತನಿಖೆ ಅಥವಾ ಶಿಕ್ಷೆಯಿಂದ ವಿನಾಯ್ತಿ ನೀಡುವ ‘ಸೌದಿ ಅರೇಬಿಯಾ ಇಮ್ಯುನಿಟಿ’ ದಯಪಾಲಿಸುವ ಚಿಂತನೆ ನಡೆಸಿದ್ದಾರೆ ಅಂತ ಗೊತ್ತಾಗಿದೆ. ಸೌದಿ ಯುವರಾಜನ ಕಡೆಯವರು ಈ ಇಮ್ಯುನಿಟಿ ಕೊಡಿ ಅಂತ ಟ್ರಂಪ್ ಸರ್ಕಾರಕ್ಕೆ ಮನವಿ ಮಾಡಿದ್ದರು. ಇದಕ್ಕೆ ಟ್ರಂಪ್ ತಾವು ಅಧಿಕಾರದಿಂದ ಇಳಿಯೋ ಮೊದಲು, ಜನವರಿ 20ರ ಒಳಗೆ ಸೈನ್ ಹಾಕ್ತಾರೆ ಅಂತ ಹೇಳಲಾಗ್ತಿದೆ. ಸೌದಿ ಯುವರಾಜನ ಮೇಲೆ ಎದುರಾಳಿಗಳ ಹತ್ಯೆ ಹಾಗೂ ಹತ್ಯೆ ಪ್ರಯತ್ನದ ಆರೋಪಗಳಿವೆ. 2018ರಲ್ಲಿ ಸೌದಿ ಯುವರಾಜ ಎಂಬಿಎಸ್​​ನ ಟೀಕಾಕಾರನಾಗಿದ್ದ ಪತ್ರಕರ್ತ ಜಮಾಲ್ ಕಶೋಗಿ ಹತ್ಯೆ ವಿಚಾರ ಆಗಿರಬಹುದು, ಹಾಗೇ ಸೌದಿಯ ಮಾಜಿ ಗುಪ್ತಚರ ಅಧಿಕಾರಿಯ ಹತ್ಯೆಗೆ ಕೆನಾಡದಲ್ಲಿ ಪ್ರಯತ್ನ ನಡೆಸಿದ ಆರೋಪ ಆಗಿರಬಹುದು. ಈ ವಿಚಾರಗಳು ಎಂಬಿಎಸ್​​ರನ್ನ ದೆವ್ವದಂತೆ ಕಾಡ್ತಿವೆ. ಹೀಗಾಗಿ ಬೈಡೆನ್ ಬಂದ ನಂತರ ಈ ವಿಚಾರ ದೊಡ್ಡ ಇಶ್ಯೂ ಆಗಬಾರದು ಅನ್ನೋದು ಯುವರಾಜನ ಲೆಕ್ಕಾಚಾರ. ಅದಕ್ಕಾಗಿನೇ ನೀವು ಹೋಗೋ ಮುಂಚೆ ನಿಮ್ಮ ವಿಶೇಷಾಧಿಕಾರ ಬಳಸಿ ನಂಗೆ ಈ ವಿಶೇಷ ವಿನಾಯ್ತಿ ಕೊಟ್ಟು ಹೋಗಿ ಅಂತ ಯುವರಾಜ ಸಲ್ಮಾನ್ ಟ್ರಂಪ್​ ಹತ್ರ ಮನವಿ ಮಾಡಿದ್ದಾರೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply