masthmagaa.com:

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು ಕಂಡಿರೋ ಡೊನಾಲ್ಡ್​ ಟ್ರಂಪ್ ಕೊನೆಗೂ ಜೋ. ಬೈಡೆನ್​ಗೆ ಅಧಿಕಾರ ಹಸ್ತಾಂತರಿಸಲು ಒಪ್ಪಿಕೊಂಡಿದ್ದಾರೆ. ಅಂದ್ಹಾಗೆ ಅಮೆರಿಕದ ‘ಜನರಲ್ ಸರ್ವಿಸ್ ಅಡ್ಮಿನಿಸ್ಟ್ರೇಷನ್’ (GSA) ಬೈಡೆನ್​ ಅವರನ್ನ ಜಯಶಾಲಿ ಅಂತ ಘೋಷಿಸಿದ ಬಳಿಕ ಟ್ರಂಪ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಟ್ರಂಪ್, ‘GSA ಮುಖ್ಯಸ್ಥೆ ಎಮಿಲಿಗೆ ಕೆಲವರು ಬೆದರಿಕೆ ಹಾಕಿದ್ದಾರೆ, ಕಿರುಕುಳ ಕೊಟ್ಟಿದ್ದಾರೆ. ಅವರಿಗೆ, ಅವರ ಕುಟುಂಬಕ್ಕೆ ಮತ್ತು GSA ಸಿಬ್ಬಂದಿಗೆ ಹೀಗೆ ಆಗೋದನ್ನ ನನಗೆ ನೋಡೋಕ್ಕಾಗಲ್ಲ. ಹೀಗಾಗಿ ಎಮಿಲಿ ಮತ್ತು ಆಕೆಯ ತಂಡ ನಿಯಮಗಳ ಪ್ರಕಾರ ಏನು ಮಾಡಬೇಕೋ ಮಾಡಲಿ ಅಂತ ಸೂಚಿಸುತ್ತೇನೆ. ನನ್ನ ತಂಡಕ್ಕೂ ಇದನ್ನೇ ಹೇಳಿದ್ದೇನೆ’ ಅಂತ ಟ್ವೀಟ್ ಮಾಡಿದ್ದಾರೆ. ಆದ್ರೆ ನಕಲಿ ವೋಟುಗಳಿಗೆ ಎಂದಿಗೂ ಸೋಲನ್ನು ಒಪ್ಪಿಕೊಳ್ಳೋದಿಲ್ಲ ಅಂತ ಡೊನಾಲ್ಡ್​ ಟ್ರಂಪ್ ಪುನರುಚ್ಚರಿಸಿದ್ದಾರೆ. ಮತ್ತೊಂದುಕಡೆ GSA ಮುಖ್ಯಸ್ಥೆ ಎಮಿಲಿ ಮಾತನಾಡಿ, ನಾನು ಯಾರ ಒತ್ತಡಕ್ಕೂ ಮಣಿದಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply