ಫಲಿತಾಂಶ ಬದಲಿಸುವಂತೆ ಟ್ರಂಪ್ ಬೆದರಿಕೆ..ಆಡಿಯೋ ವೈರಲ್..!

masthmagaa.com:

ಅಮೆರಿಕ: ಚುನಾವಣಾ ಫಲಿತಾಂಶವನ್ನು ಮೊದಲಿನಿಂದಲೂ ನಿರಾಕರಿಸುತ್ತಲೇ ಬಂದಿರೋ ಡೊನಾಲ್ಡ್​ ಟ್ರಂಪ್ ಅವರ ಆಡಿಯೋವೊಂದು ಈಗ ಬಿರುಗಾಳಿ ಎಬ್ಬಿಸಿದೆ. ಜಾರ್ಜಿಯಾ ಚುನಾವಣಾ ಅಧಿಕಾರಿ ಮತ್ತು ರಿಪಬ್ಲಿಕನ್ ಪಕ್ಷದ ನಾಯಕ ರಫೆನ್ ಸ್ಪೆರ್ಗರ್​​ ಅವರಿಗೆ ಕರೆ ಮಾಡಿದ್ದ ಡೊನಾಲ್ಡ್​ ಟ್ರಂಪ್, ಫಲಿತಾಂಶ ಬದಲಿಸುವಂತೆ ಒತ್ತಡ ಹೇರಿದ್ದಾರೆ. ನನಗೆ 11,780 ಮತಗಳ ಅಗತ್ಯತೆ ಇದೆ.. ನೀವು ಈ ಕೆಲಸವನ್ನು ಮಾಡಬೇಕು ಅಂತ ಒತ್ತಾಯಿಸಿದ್ದಾರೆ..

ಆದ್ರೆ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸುವ ರಫೆನ್​​ಸ್ಪೆರ್ಗರ್​​, ಜಾರ್ಜಿಯಾದ ಫಲಿತಾಂಶ ಸರಿಯಾಗೇ ಇದೆ. ಈಗ ಅದನ್ನು ಬದಲಿಸಲು ಸಾಧ್ಯವಿಲ್ಲ ಅಂತಾರೆ.. ಅದಕ್ಕೆ ಕೋಪಗೊಳ್ಳುವ ಟ್ರಂಪ್​​, ಒಂದ್ವೇಳೆ ನಾನು ಹೇಳಿದಂತೆ ಮಾಡದೇ ಇದ್ದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತೆ ಹುಷಾರ್ ಅಂತ ಬೆದರಿಕೆ ಹಾಕಿದ್ದಾರೆ. ಜೊತೆಗೆ ಜಾರ್ಜಿಯಾ ಚುನಾವಣಾ ಅಧಿಕಾರಿಗೂ, ನೀನು ದೊಡ್ಡ ರಿಸ್ಕ್​ ತೆಗೆದುಕೊಳ್ತಿದ್ದೀಯಾ ಅಂತ ಬೆದರಿಸಿದ್ದಾರೆ. 1 ಗಂಟೆಯಷ್ಟಿರುವ ಈ ಟೇಪ್ ಈಗ ಅಮೆರಿಕ ರಾಜಕೀದಲ್ಲಿ ಸಂಚಲನ ಮೂಡಿಸಿದೆ. ಇದನ್ನು ವಾಟರ್​ಗೇಟ್ ಹಗರಣಕ್ಕೆ ಹೋಲಿಸಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡೆಮಾಕ್ರಟಿಕ್ ಪಕ್ಷದ ನಾಯಕರು, ಇದು ನಿರಾಶೆಯ ಧ್ವನಿ.. ಟ್ರಂಪ್ ಅವರು ಅಧಿಕಾರದ ದುರ್ಬಳಕೆ ಮಾಡಿಕೊಳ್ತಿದ್ದಾರೆ ಅಂತ ಕಿಡಿಕಾರಿದ್ದಾರೆ.

ಅಂದಹಾಗೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಡೆಮೋಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಗೆಲುವು ದಾಖಲಿಸಿದ್ದರು. ಅಮೆರಿಕದ 50 ರಾಜ್ಯಗಳ ಎಲೆಕ್ಟೋರಲ್ ಕಾಲೇಜ್​​ನಲ್ಲಿ ಬೈಡೆನ್ ಅವರಿಗೆ 306 ಮತಗಳು ಸಿಕ್ಕಿದ್ರೆ, ಟ್ರಂಪ್ ಅವರಿಗೆ 232 ಮತಗಳು ಬಂದಿವೆ.. ಅಮೆರಿಕ ಅಧ್ಯಕ್ಷ ಹುದ್ದೆಗೇರಲು 270 ಮತಗಳ ಅಗತ್ಯತೆ ಇದೆ.

-masthmagaa.com

Contact Us for Advertisement

Leave a Reply